ಸ್ಥಳೀಯ ಸುದ್ದಿ
ಗ್ರಾಮೀಣ ಕ್ಷೇತ್ರದಲ್ಲಿ ಶುರುವಾಗಿದೆ ಕಾಂಗ್ರೆಸ್ ಗ್ಯಾರಂಟಿ ನೊಂದಣಿ ಕಾರ್ಯ
ಧಾರವಾಡ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ನೊಂದಣಿ ಕಾರ್ಯ ಜೋರಾಗಿಯೇ ನಡೆದಿದೆ.
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಹಾಗೂ ಮದಿಹಾಳದಲ್ಲಿಯೂ ಕಾಂಗ್ರೆಸ್ ಗ್ಯಾರಂಟಿ ನೊಂದಣಿ ಶುರುವಾಗಿದ್ದು, ಪಕ್ಷದತ್ತ ವರ್ಚಸಿಗೆ ಮನಸೋತು ಹಲವರು ನೊಂದಣಿ ಮಾಡಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡೆ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರು ಬಿರುಸಿನ ಓಡಾಟ ನಡೆಸಿದ್ದು, ಸಾವಿರಾರು ಮಂದಿಯಿಂದ ನೊಂದಣಿ ಮಾಡಿಸುತ್ತಿದ್ದಾರೆ.
ಪಕ್ಷದ ಸಂಘಟನೆಗಾಗಿ ಕಾಂಗ್ರೆಸ್ ಪಕ್ಷ ಪ್ರನಾಳಿಕೆ ಬಿಡುಗಡೆ ಮಾಡಿ, ಜನರತ್ತ ಮನೆ ಮನೆಗೆ ಹೋಗುತ್ತಿದ್ದು, ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ದೂರದ ಬೆಂಗಳೂರಿನಿಂದಲೇ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು, ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸುತ್ತಿದ್ದು, ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಹೀಗಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ ಪಕ್ಷದ ಪ್ರಚಾರದ ಜೋತೆ ಜೋತೆಗೆ ಕಾಂಗ್ರೆಸ್ ಗ್ಯಾರಂಟಿ ನೊಂದಣಿ ಜೋರಾಗಿಯೇ ನಡೆದಿದೆ.