ಗೌನ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದ ದೇಶದ ಮೊದಲ ಮೇಯರ್
ಧಾರವಾಡ
ಗಣ್ಯರ ಕಾರ್ಯಕ್ರಮದಲ್ಲಿ ಮೇಯರ್ ಆಗಿರುವವರು ಶಿಷ್ಟಾಚಾರದಂತೆ ಗೌನ ಧರಿಸುವ ಸಂಪ್ರದಾಯವಿದೆ. ಆದ್ರೆ ಈ ಸಂಪ್ರದಾಯಕ್ಕೆ ಇತೀಶ್ರೀ ಹಾಡಿದ ದೇಶದ ಮೊದಲ ಮೇಯರ್ ಎನ್ನುವ ಹಿರಿಮೆಗೆ ಧಾರವಾಡ ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಪಾತ್ರರಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮಹಾನಗರ ಪಾಲಿಕೆ ಹಾಗೂ ಅವಳಿ ನಗರದ 12 ಲಕ್ಷ ನಾಗರಿಕರ ಪರವಾಗಿ ಪೌರ ಸನ್ಮಾನವನ್ನು ಸ್ವೀಕರಿಸಿದ ಅತ್ಯಂತ ಸಂತಸದ ಕ್ಷಣಗಳನ್ನು ಅವೀಸ್ಮರಣಿಯವಾಗಿಸಿಕೊಂಡಿದ್ದಾರೆ ಮೇಯರ್ ಈರೇಶ ಅಂಚಟಗೇರಿ ಅವರು ಗೌನ ಧರಿಸದೇ ಸಾಮಾನ್ಯವಾಗಿ ಕೋಟ್ ಹಾಕಿಕೊಂಡು ಇಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು.
ಅವಳಿ ನಗರದ 5 ಸಾವಿರ ಜನರು ಭಾಗಿಯಾಗಿದ್ದ ವಿಶೇಷ ಕಾರ್ಯಕ್ರಮದ ವಿಡಿಯೋ ಇದೀಗ ಅವಳಿನಗರದಲ್ಲಿ ಜನಪ್ರೀಯವಾಗಿ ಎಲ್ಲೇಡೆ ವೈರಲ್ ಆಗಿದೆ.
ಗೌರವಾನ್ವಿತ ರಾಷ್ಟ್ರಪತಿಗಳ ಸನ್ಮಾನ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ ಗೇಹ್ಲೋಟ್ , ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರು, ಕೇಂದ್ರ ಕಲ್ಲಿದ್ದಲು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ರವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ರವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.