Festival Ganesh chaturthiUncategorizedಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಗಣಪತಿಗೆ ಗಣಹೋಮ ಮಾಡಿಸಿದ ಮುಸ್ಲಿಂ ಯುವಕ: ನಾವೆಲ್ಲರೂ ಒಂದೇ..!

POWER CITY NEWS:

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಅಂದರೆ ನಿಜಕ್ಕೂ ಅದು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿರುವ ನಗರ. ಇಂತಹ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನೊಬ್ಬ ಗಣೇಶನಿಗೆ ಗಣಹೋಮ ಮಾಡಿಸುವ ಮೂಲಕ ಸೌಹಾರ್ದತೆ ಸಾಕ್ಷಿಯಾಗಿದ್ದಾನೆ‌. ಅಷ್ಟಕ್ಕೂ ಏನಿದು ಸ್ಟೋರಿ..? ಆಗಿದ್ದಾದರೂ ಎಲ್ಲಿ ಅಂತೀರಾ ತೋರಿಸ್ತಿವಿ ನೋಡಿ..

ಹುಬ್ಬಳ್ಳಿಯ ಕೃಷ್ಣಾನಗರದಲ್ಲಿ ಯುವಕರೆಲ್ಲರೂ ಸೇರಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಇಲ್ಲಿ ಯಾವುದೇ ಜಾತಿಮತ ಬೇಧವಿಲ್ಲದೇ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, ಇಂದು ನಡೆದ ಗಣಹೋಮ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಮುಸ್ಲಿಂ ಯುವಕ ಆಸೀಫ್ ಮುಲ್ಲಾ ತಾನೇ ಸ್ವತಃ ಪೂಜೆಗೆ ಕುಳಿತು. ನಾವೆಲ್ಲರೂ ಒಂದೇ ಎಂಬುವಂತ ಸಂದೇಶವನ್ನು ಸಾರಿರುವುದು ನಿಜಕ್ಕೂ ವಿಶೇಷವಾಗಿದೆ.ಇನ್ನೂ ಕೃಷ್ಣಾನಗರದಲ್ಲಿ ಪ್ರತಿವರ್ಷವೂ ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ. ಆದರೆ ಈ ವರ್ಷ ಇಂತಹದೊಂದು ಸಂದೇಶ ನೀಡುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಬೇಧ ಭಾವವಿಲ್ಲ ಎಂಬುವಂತ ಸಂದೇಶ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Related Articles

Leave a Reply

Your email address will not be published. Required fields are marked *