ಧಾರವಾಡ

ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯಾ ಹಿರೇಮಠ ಇನ್ನು ನೆನಪು ಮಾತ್ರ.

ಧಾರವಾಡ

ಅತಿಯಾದ ರಕ್ತದ ಒತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಸವಲಿಂಗಯ್ಯಾ ಹಿರೇಮಠ (63) ಅವರು,
ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ಇಂದು ರವಿವಾರ ನಸುಕಿನ ಜಾವ ನಿಧನ ಹೊಂದಿದ್ದಾರೆ.

ಮೂಲತ: ಬೆಳಗಾವಿ ಜಿಲ್ಲೆಯ ತಾಲೂಕಿನ ಬೈಲೂರಿನವರಾದ ಇವರು ಧಾರವಾಡದಲ್ಲಿ ಬಂದು ನೆಲೆಸಿದ್ದರು.

ಜಾನಪದ ವಿಷಯದಲ್ಲಿ ಎಂಎ ಪದವೀಧರಾದ ಇವರು, 1983 ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದ್ರು.

ಸಾಕಷ್ಟು ಪ್ರಶಸ್ತಿಗಳು ಕೂಡ ಇವರಿಗೆ ಲಭಿಸಿವೆ.

ಪತ್ರಕರ್ತರಿಗೆ ಇವರಿಗೆ ಆತ್ಮೀಯ ಸಂಬಂಧ.‌ ಬಸಲಿಂಗಯ್ಯಾ ಅಜ್ಜಾ, ಮಾವಾ ಎಂದೇ ಅಕ್ಕರೆಯಿಂದ ಎಲ್ಲಾ ಪತ್ರಕರ್ತರ ಬಳಗದವರು ಇವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇವರಿಗೂ‌ ಕೂಡ ಪತ್ರಕರ್ತರ ಬಗ್ಗೆ ಕಾಳಜೀ ಪ್ರೀತಿ ಇತ್ತು.

ಪ್ರತಿ ವರ್ಷದ ಸಂಕ್ರಮಣದ ಸಮಯದಲ್ಲಿ ಹೊಸ ವರ್ಷದ ಸ್ವಾಗತ ಎಂದು ಎಲ್ಲರಿಗೂ ಆಹ್ವಾನ ಕೊಟ್ಟು, ಸಾಧನಕೇರಿ ಪಾರ್ಕಗೆ ಕರೆಯಿಸಿ, ಊಟ ಮಾಡಿಸಿ ಸಂಕ್ರಾಂತಿ ಆಚರಿಸುತ್ತಿದ್ದರು ಬಸವಲಿಂಗಯ್ಯ ಅಜ್ಜನವರು.

ಇವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಮಾಡಿ ಎಂದು ಧಾರವಾಡದ ಹಿರಿಯ ಪತ್ರಕರ್ತರಾದ ಮುಸ್ತಫಾ ಕುನ್ನಿಭಾವಿ ಅವರು ಸಿಎಂಗೆ ಟ್ವೀಟ್ ಮೂಲಕ ಮನವಿಯನ್ನು ಸಹ ಮಾಡಿದ್ದಾರೆ.

ಬಸವಲಿಂಗಯ್ಯಾ ಹಿರೇಮಠ ಅವರು, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಇವರು ಮಗ ಭೂಷಣ, ಪತ್ನಿ ವಿಶ್ವೇಶ್ವರಿ ಹಿರೇಮಠ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಂಜೆ 4 ಕ್ಕೆ ಧಾರವಾಡದ ಮನೆಗೆ ಪಾರ್ಥಿವ ಶರೀರ ಬೆಂಗಳೂರಿನಿಂದ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಾಳೆ ಕಿತ್ತೂರು ತಾಲೂಕಿನ ಬೈಲೂರುನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *