ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯ ಹೊರಗಿದ್ದುಕೊಂಡೆ ಮಾಡಿಸುತ್ತಿರುವ ಶಾಸಕ ವಿನಯ ಕುಲಕರ್ಣಿ
ಧಾರವಾಡ
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಮಾನ್ಯ ಶಾಸಕರಾದ ಶ್ರೀ ವಿನಯ ಕುಲಕರ್ಣಿಯವರು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಸಂಗಪ್ಪ ಗಾಭಿಯವರು ಜಿಲ್ಲಾ ಆಸ್ಪತ್ರೆಗಳಿಗೆ ಅವಶ್ಯಕತೆ ಇರುವ 200 ಹಾಸಿಗೆಯ ವ್ಯವಸ್ಥೆ,ಅಂಬ್ಯುಲನ್ಸ,ಕುಡಿಯುವ ನೀರಿಗಾಗಿ ಆರ್.ಓ ಯೂನಿಟ್,ಎರಡು ಡೈಯಾಲೆಸಿಸ್ ಯೂನಿಟಗಳ ಅವಶ್ಯಕತೆಗಳ ಬಗ್ಗೆ ಶಾಸಕರಿಗೆ ತಿಳಿಸಿದರು.
ವಿಡಿಯೋ ಮುಖಾಂತರ ಹೆರಿಗೆ ವಿಭಾಗ,ಚಿಕ್ಕ ಮಕ್ಕಳ ವಿಭಾಗ,ರಕ್ತ ಭಂಡಾರಗಳನ್ನು ವೀಕ್ಷಿಸಿ ಮಾತನಾಡಿದ ವಿನಯ ಕುಲಕರ್ಣಿಯವರು ಮಾತನಾಡಿ ,ಅವಶ್ಯಕತೆಗಳ ಪಟ್ಟಿ ಮಾಡಿ ನನಗೆ ತಲುಪಿಸಿ.
ಸಂಬಂಧ ಪಟ್ಟ ಸಚಿವರು ಹಾಗೂ ಮಾನ್ಯ ಮಂತ್ರಿಗಳಿಗೆ ಮನವರಿಕೆ ಮಾಡಿ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಹಂತ ಹಂತವಾಗಿ ಎಲ್ಲ ಕೆಲಸಗಳನ್ನು ಮಾಡೋನ ಎಂದರು.
ಜಿಲ್ಲಾಸ್ಪತ್ರೆಯ ವ್ಯವಸ್ಥೆಗಳು ಹಿಂದಿನ ಸರಕಾರದ ಸಮಯದಲ್ಲಿ ಹದಗೆಟ್ಟಿದ್ದು ,ಎಲ್ಲ ವೈದ್ಯ ಸಿಬ್ಬಂದಿ ಜನಸಾಮಾನ್ಯರೊಂದಿಗೆ ಸಹಕಾರದಿಂದ ಹಾಗೂ ಮಾನವೀಯತೆಯ ನೆಲೆಗಟ್ಟಿನಲ್ಲಿ ಸ್ಪಂಧಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಡಾ-ರಾಜೇಂದ್ರ ಹಳ್ಳಿಕೇರಿ,ಯೋಗೇಶ ಬನಸೋಡೆ,ರಾಜೇಶ ಕೋನರಡ್ಡಿ,ಡಾ- ಶ್ರೀನಿವಾಸಲು,ಡಾ- ಸೊಲ್ಲಾಫುರ ,ಮಂಜುನಾಥ ಮರಸರೆಡ್ಡಿ,ಹಾಗೂ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ,ಬ್ಕಾಕ್ ಅಧ್ಯಕ್ಷ ಅರವಿಂದ ಏಗನಗೌಡರ ಮಹಾನಗರ ಪಾಲಿಕೆ ಸದಸ್ಯರಾದ ದೀಪಾ ನೀರಲಕಟ್ಟಿ,ಸೂರವ್ವ ಪಾಟೀಲ ಮುಖಂಡರಾದ ಸಂಜೀವ ಲಕಮನಳ್ಳಿ,ಆತ್ಮಾನಂದ ಅಂಗಡಿ,ಆನಂದ ಸಿಂಗನಾಥ,ಬಸವರಾಜ ಜಾಧವ,ಸಿದ್ದಪ್ಪ ಸಪ್ಪೂರಿ,ಕಿಶೋರ ಬಡಿಗೇರ,ಶಿವಾನಂದ ಗಿರಿಯಪ್ಪನವರ,ಸಂತೋಷ ನೀರಲಕಟ್ಟಿ,ಪ್ರಕಾಶ ಹುಲಮನಿ ಮುಂತಾದವರು ಉಪಸ್ಥಿತರಿದ್ದರು.