ಕ್ಯಾಮರಾಮನ್ ಮೇಲೆ ಹಲ್ಲೆ ಮಾಡಿದ ಪೊಲೀಸಪ್ಪ.
ಧಾರವಾಡ
ಧಾರವಾಡದ ಖಾಸಗಿ ವಾಹಿನಿ ಕ್ಯಾಮೆರಾ ಮನ್ ಮೇಲೆ ಪೊಲೀಸ್ ಹಲ್ಲೆ ಮಾಡಿರುವುದನ್ನು ಖಂಡಿಸಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಮನೆಯ ಎದುರು ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಕ್ಕೆ ಭದ್ರತೆ ಬಂದೋಬಸ್ತ್ ಗಾಗಿ ನಿಯೋಜಿಸಿದ್ದ
ಪೊಲೀಸ್ ಪೇದೆ ಒಬ್ಬ ಖಾಸಗಿ ವಾಹಿನಿ ಕ್ಯಾಮೆರಾ ಮನ್ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ತಕ್ಷಣ ಘಟನೆ ಖಂಡಿಸಿ ಕೃಷಿ ವಿವಿ
ವಿಸಿ ಮನೆ ಎದುರು ಪ್ರತಿಭಟನೆ ನಡೆಸಿದ
ಮಾಧ್ಯಮ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿ ವರ್ಗದವರು ಕೆಳಹಂತದ ಸಿಬ್ಬಂದಿಯ ವರ್ತನೆ ತಿದ್ದಬೇಕು. ಸಾಧ್ಯವಾದರೆ ಅವರಿಗೆ ತರಬೇತಿಯನ್ನು ನೀಡುವ ಮೂಲಕ ಅವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಬೇಕು ಎಂದು ಹಿರಿಯ ಪತ್ರಕರ್ತ ಬಸವರಾಜ ಹೊಂಗಲ್ ಹೇಳಿದರು.
ಹುಬ್ಬಳ್ಳಿಯ
ಬೆಂಡಿಗೇರಿ ಪೋಲಿಸ್ ಠಾಣೆಯ ಪೇದೆ ಬಸವರಾಜ ಸಿಂಗನ್ನವರ ಹಲ್ಲೆ ನಡೆಸಿ, ನಿಂದಿಸಿದ್ದಾನೆ ಎಂದು ದೂರಿದರು.
ಅಲ್ಲದೆ, ತಕ್ಷಣ ಅವರ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಹೋರಾಟದ ದಾರಿ ತುಳಿಯುವುದಾಗಿ ಎಚ್ಚರಿಸಿದರು.
ಮಾಹಿತಿಯನ್ನು ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ರು. ಕೃಷಿ ಸಚಿವ ಬಿ.ಸಿ. ಪಾಟೀಲ, ಪೊಲೀಸ್ ಪೇದೆಗೆ ಕಾರಣ ಕೇಳಿ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.