ಕೇದಾರನಾಥ ಮಧ್ಯಮಹೇಶ್ವರ ಉತ್ಸವ ಮೂರ್ತಿ ಡೋಲಿ ಪ್ರಸ್ಥಾನ…
ಉತ್ತರಾಖಂಡ
ಕೇದಾರನಾಥ ದೇವಸ್ಥಾನದ ಮಧ್ಯಮಹೇಶ್ವರ ದೇವಸ್ಥಾನ ಇದು.
ಎರಡನೇ ಕೇದಾರನಾಥ ಎಂದು ಕರೆಯುವುದುಂಟು, ಬಹಳ ಶಕ್ತಿ ಸ್ಥಳವಾದ ಈ ದೇವಸ್ಥಾನ ಕೇದಾರನಾಥ ದೇವಸ್ಥಾನದಲ್ಲಿಯೇ ಬರುವುದರಿಂದ ಅವರೇ ಆಡಳಿತ ಮಂಡಳಿ ಕೂಡ ಇದೆ.
ಮಧ್ಯ ಮಹೇಶ್ವರ ದೇವಸ್ಥಾನದ
ಆಚಾರವೇ ತನ್ನ ಮಹದಾಭರಣವಾಗಿಸಿಕೊಂಡು, ಭಕ್ತರ ಬಯಕೆಗಳನ್ನು ಈಡೇರಿಸುವ, ದೇವತ್ವ ದೀಪಿಸುವ ಪರಂಜ್ಯೋತಿ ಸ್ವರೂಪನಾದ ದೈವ ಮಧ್ಯ ಮಹೇಶ್ವರನಾಗಿದ್ದಾನೆ.
ದ್ವಿತೀಯ ಕೇದಾರನಾಥನೆಂದು ಪ್ರಸಿದ್ಧನಾದ ಮಧ್ಯಮಹೇಶ್ವರ ಮಂದಿರ ಶೀತಕಾಲ ಪ್ರಯುಕ್ತ ಇಂದು ಬೆಳಗಿನ 8-30 ಕ್ಕೆ ಬಾಗಿಲಾಕಿ ಉತ್ಸವ ಮೂರ್ತಿಯ ಡೋಲಿ ಪ್ರಸ್ಥಾನವಾಯಿತು.
ಇಂದು ಗೊಂಡಾರಕ್ಕೆ ದಯಮಾಡಿಸಿ ಅಲ್ಲಿಯೇ ಮೊಕ್ಕಾಂ ಮಾಡಲಿದೆ.
ನಾಳೆ ಪ್ರಾಥಃಕಾಲಾದಲ್ಲಿ ಅಲ್ಲಿಂದ ಪ್ರಯಾಣಿಸಿ ರಾಶಿ ಮೊಕ್ಕಾಂ ಮಾಡುವುದು.ನಾಡಿದ್ದು ರಾಶಿಯಿಂದ ಗಿರಿಯಾ ಎನ್ನುವ ಗ್ರಾಮದಲ್ಲಿ ಮೊಕ್ಕಾಂ ಮಾಡುವುದು.
_25 ಕ್ಕೆ ಊಖೀಮಠದಲ್ಲಿರುವ ವೈರಾಗ್ಯ ಸಿಂಹಾಸನ ಮಹಾ ಸಂಸ್ಥಾನ ಪೀಠಕ್ಕೆ ಭವ್ಯವಾದ ಮೇರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿರುವರು.