ಕುತೂಹಲ ಸೃಷ್ಟಿಸಿದ ರಾಮಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ
ಗಜೇಂದ್ರಗಡ: ತಾಲ್ಲೂಕಿನ ರಾಮಾಪೂರ ಗ್ರಾಮ ಪಂಚಾಯಲ್ಲಿ ಸರ್ಕಾರವು ನಿಗದಿಪಡಿಸಿದಂತೆ ಅಧಿಕಾರ ವಿಕೇಂದ್ರೀಕರಣ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರ ಆಡಳಿತ ಅವಧಿ ಎರಡುವರೆ ವರ್ಷದ ನಿಯಮದಂತೆ ಸಮೀಪದ ರಾಮಾಪೂರ ಗ್ರಾಮ ಪಂಚಾಯಿತಿಗೆ ಜುಲೈ ೨೬ ರಂದು ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು
ರಾಮಾಪೂರ ಗ್ರಾಮ ಪಂಚಾಯತಿಯು ಮೊದಲನೇ ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ದಿತು.೨೦ ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬಂದ್ದಿತು.
ರಾಮಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಅವಿರೋಧವಾಗಿ ಹುಲಗವ್ವ ಯಲ್ಲಪ್ಪ ಸಣ್ಣಕ್ಕಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಕಮಹಾದೇವಿ ವಾಲ್ಮೀಕಿ ಹಾಗೂ ಮುತ್ತವ್ವ ಗುಡದೂರ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು
ಬಹಳ ಕುತೂಹಲ ಕೆರಳಿಸಿದ್ದ ಉಪಾಧ್ಯಕ್ಷರ ಆಯ್ಕೆ ರಾಮಾಪೂರ ಗ್ರಾಮ ಪಂಚಾಯಿತಿಯಲ್ಲಿ ೧೪ ಸದಸ್ಯರನ್ನು ಹೊಂದಿದ್ದು ೧೪ ರಲ್ಲಿ ೬ ಮತ ಬಿಜೆಪಿ ಬೆಂಬಲತ ಅಭ್ಯರ್ಥಿಗೆ ೫ ಮತ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲತ ೩ ಮತಗಳು ಅಸಿಂಧು ಆಗಿದ್ದಾವೆ.
ನಾಮ ಪತ್ರಗಳು ಕ್ರಮಬದ್ಧವಾಗಿರುವುದರಿಂದ ಉಪಾಧ್ಯಕ್ಷ ನಾಮಪತ್ರಗಳನ್ನು ಸ್ವೀಕರಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಗೌಪ್ಯ ಮತದಾನ ನಡೆಸಲಾಗಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಕ್ಕಮಹಾದೇವಿ ವಾಲ್ಮೀಕಿ ೫ ಮತಗಳನ್ನು ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುತ್ತವ್ವ ಗುಡದೂರ ೬ ಮತಗಳನ್ನು ಪಡೆದುಕೊಳ್ಳುವುದರ ಮೂಲಕ ೧ ಮತಗಳ ಅಂತರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷರಾಗಿ ಹುಲಗವ್ವ ಯಲ್ಲಪ್ಪ ಸಣ್ಣಕ್ಕಿ ಉಪಾಧ್ಯಕ್ಷರಾಗಿ ಮುತ್ತವ್ವ ಗುಡದೂರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸುರೇಶ ಬಿ ಡನಾಕ ಘೋಷಣೆ ಮಾಡಿದರು.
ಫಲಿತಾಂಶ ಘೋಷಣೆಯಾಗುತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು
ಇದೆ ವೇಳೆ ನೂತನ ಅಧ್ಯಕ್ಷ ಹುಲಗವ್ವ ಯಲ್ಲಪ್ಪ ಸಣ್ಣಕ್ಕಿ ಮಾತನಾಡಿ ತಮ್ಮ ಇಲ್ಲಿಯವರೆಗಿನ ಜೀವಿತ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿಕೊಂಡು ಬಂದ ಫಲವಾಗಿ ನಾನು ಇಂದು ಆಯ್ಕೆಯಾಗಲು ಅನುಕೂಲವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಜ್ ಘೋರ್ಪಡೆ, ಶ್ರೀಧರ್ ಬಿದರಳಿ,ರಾಜು ಸಾಂಗ್ಲೀಕರ, ರಾಚಯ್ಯ ಬಾಳಿಕಾಯಿಮಠ, ಬಾಲಚಂದ್ರ ವಾಲ್ಮೀಕಿ,ಹಸನಸಾಬ ತಟಗಾರ, ಉಮೇಶ ರಾಠೋಡ, ವಿಜಯಕುಮಾರ ಜಾದವ, ರಮೇಶ ರಾಮಜಿ, ಯಲ್ಲಪ್ಪ ಸಣ್ಣಕ್ಕಿ, ಪ್ರಶಾಂತ್ ರಾಠೋಡ,ಹರಿಹಂತ ಬಾಗಮಾರ, ಪ್ರಭುಲಿಂಗಯ್ಯ ಹಿರೇಮಠ, ಬಸುರಾಜ ನಡಕಟ್ಟಿನ, ಪ್ರಕಾಶ್ ರಾಠೋಡ, ಆನಂದ ರಾಠೋಡ,ಮುತ್ತು ಮಾದರ ಉಪಸ್ಥಿತರಿದ್ದರು