ಸ್ಥಳೀಯ ಸುದ್ದಿ
ಕಿಲ್ಲಾದಲ್ಲಿ ಸಿಲುಕಿಕೊಂಡ ಮಿನಿ ಟೆಂಪೋ
ಧಾರವಾಡ
ಭಾರಿ ವಾಹನಗಳಿಗೆ ನಿಷೇಧವಿದ್ದರೂ, ಅದನ್ನು ವಿರೋಧಿಸಿ ಸಂಚಾರ ಮಾಡಿದ ಪರಿಣಾಮ, ಮಿನಿ ಟೆಂಪೋ ಒಂದು ಕಿಲ್ಲಾದ ಕಮಾನ್ ಮುಂದೆ ಇರುವ ದೊಡ್ಡದಾದ ಕಬ್ಬಿಣದ ಪೋಲ್ ಗೆ ಸಿಕ್ಕಿಹಾಕಿಕೊಂಡ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.
ಇದನ್ನೆಲ್ಲಾ ಧಿಕ್ಕರಿಸಿದ ಪ್ರಮೋದ ರೋಡಲೈನ್ಸ ಎನ್ನುವ ಮಿನಿ ಟೆಂಪೊ ಸಂಚಾರ ಮಾಡಲು ಹೋಗಿ ಈ ರೀತಿ ಸಿಲುಕಿ ಹಾಕಿಕೊಂಡಿತ್ತು.
ಧಾರವಾಡ ಶಿವಾಜಿ ವೃತ್ತದಲ್ಲಿ ಇರುವ ಕಿಲ್ಲಾದ ಕಮಾನ್ ಮುಂದೆ ಚಿಕ್ಕದಾದ ರಸ್ತೆ ಇರುವ ಕಾರಣ ಈ ರೀತಿ ಕಬ್ಬಿಣದ ಪೋಲ್ ಹಾಕಲಾಗಿದೆ.
ಭಾರಿ ವಾಹನಗಳನ್ನು ನಿಷೇಧಿಸುವ ಬ್ಯಾರಿಕೇಡ್ ಪೋಲ್ ಇದಾಗಿದ್ದು, ಇಲ್ಲಿ ಎಚ್ಚರಿಕೆಯ ಫಲಕವನ್ನು ಸಹ ಹಾಕಲಾಗಿದೆ.
ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಿನಿ ಟೆಂಪೋ ರಸ್ತೆಯಲ್ಲಿ ಸಿಲುಕಿದ ಕಾರಣ ಕೆಲಹೊತ್ತು, ಸಂಚಾರಕ್ಕೆ ಅಡಚಣೆ ಉಂಟಾಯಿತು.