ಕಿಮ್ಸ್ ಸಿಬ್ಬಂದಿಯ ಕತ್ತಲೆಯ ಸಮಸ್ಯೆಗೆ ಶಾಶ್ವತ ಮುಕ್ತಿ.
ಹುಬ್ಬಳ್ಳಿ
ಹೌದು ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ. ” ಕಗ್ಗತ್ತಲೆಯಲ್ಲೇ ಕರ್ತವ್ಯಕ್ಕೆ ತೆರಳುವ ಕಿಮ್ಸ್ ಕರೋನಾ ವಾರಿಯರ್ಸ್ ಗಳು “
ಎಂಬ ಶೀರ್ಷಿಕೆ ಯಡಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಕಿಮ್ಸ್ ಕ್ಯಾಂಪಸ್ ನ ಪ್ರಮುಖ ಭಾಗವಾಗಿರುವ ಈ ರಸ್ತೆಯಲ್ಲಿ
ಸಂಜೆಯಾದರೆ ಸಾಕು ದಟ್ಟನೆಯ ಕತ್ತಲು ಆವರಿಸಿ ಬಿಡುತ್ತಿತ್ತು.
ಕಳ್ಳಕಾಕರಿಗೆ ಹೇಳಿ ಮಾಡಿಸಿದ ರಸ್ತೆಯಂತೆ ಮಾರ್ಪಡುತ್ತಿತ್ತು. ರಾತ್ರಿ ಪಾಳಿ ಕೆಲಸಕ್ಕೆ ಹೋಗುವ ಮಹಿಳಾ ಶುಶ್ರೂಷಕಿಯರಂತೂ. ಭಯದಲ್ಲೇ ಕತ್ತಲೆಯ ಈ ರಸ್ತೆ ಪಾರು ಮಾಡಿದ ಬಳಿಕವೇ ಸುಸಜ್ಜಿತ ದೀಪ ಅಳವಡಿಸಿರುವ ಕಿಮ್ಸ್ ಒಪಿಡಿ ಆವರಣದಿಂದ ಬೀಳು ಬೆಳಕಿನ ಸಹಾಯ ಪಡೆದು ಕರ್ತವ್ಯಕ್ಕೆ ಮುಂದೆ ಸಾಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು.
ಇದರ ಬಗ್ಗೆ ಆಡಳಿತ ಮಂಡಳಿಯ ಕೆಳ ವರ್ಗದ ಅಧಿಕಾರಿಗಳು ನಿರಾಸಕ್ತಿ ತೊರಿಸುತ್ತಿದ್ದರು ಎನ್ನಲಾಗಿದೆ.
ಸಾಕಷ್ಟು ದೂರು ನೀಡಿದರು ಸಹ ಇಲ್ಲಿನ ಆಡಳಿತ ಮಂಡಳಿ ಅಧಿಕಾರಿಗಳು ಮಾತ್ರ ಸೌಕರ್ಯ ಕಲ್ಪಿಸಿ ಕೊಡಲು ಆಸಕ್ತಿ ತೋರಿಸುತ್ತಿರಲಿಲ್ಲ. ಹೀಗಾಗಿ ಪವರ್ ಸಿಟಿ ನ್ಯೂಸ್ ವರದಿಗಾರರ ಗಮನಕ್ಕೆ ತಂದಾಗಲೇ ಇದಕ್ಕೊಂದು ಪರಿಹಾರ ಕಂಡು ಕೊಳ್ಳುವಲ್ಲಿ ಸಫಲರಾದೆವು ಎಂದು ಹರ್ಷ ವ್ಯಕ್ತ ಪಡಿಸ್ತಾರೆ ಇಲ್ಲೀನ ಕ್ವಾಟರ್ಸ ನಿವಾಸಿಗಳು ಮತ್ತು ಸಿಬ್ಬಂದಿಗಳು.
ಕಿಮ್ಸ್ ಆಡಳಿತ ವಿಭಾಗದ ಖಡಕ್ ಮಹಿಳಾ ಅಧಿಕಾರಿ ಎನಿಸಿಕೊಂಡ ರಾಜೇಶ್ವರಿ ಜೈನಾಪುರ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ. ಇಲ್ಲಿನ ಸಮಸ್ಯೆಯನ್ನು ಸರಿಪಡಿಸಿದ್ದಾರೆ. ಆದರೆ ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು ಮಾತ್ರ ಇದರ ಕುರಿತು ಗಮನ ಹರಿಸದೆ! ದೂರವೆ ಉಳಿಯುತ್ತಿದ್ದಾರೆ.
ವಲಯ ಕಚೇರಿ 5ರಲ್ಲಿನ ಪಾಲಿಕೆಯ ಅಧಿಕಾರಿಗಳು ಮಾತ್ರ ದಿನ ಜಾಂದೆ ಪಗಾರ ಆಂದೆ ಎನ್ನುವಂತೆ ವರ್ತಿಸುತ್ತಿದ್ದಾರೆ.