ಸ್ಥಳೀಯ ಸುದ್ದಿ
ಕಿತ್ತೂರಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರಿಂದ ಕ್ಷೇತ್ರದ ಜನರ ಅಹವಾಲು ಸ್ವೀಕಾರ
ಕಿತ್ತೂರು
ಕಿತ್ತೂರಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರು, ಕ್ಷೇತ್ರದ ಜನರ ಅಹವಾಲು ಸ್ವೀಕಾರ ಮಾಡಿದ್ರು.
ಜೆಜೆಎಂ ಕಾಮಗಾರಿ ಧಾರವಾಡ ಗ್ರಾಮೀಣ ಭಾಗದಲ್ಲಿ ಅವೈಜ್ಞಾನಿಕ ರೀತಿಯಿಂದ ಕೂಡಿದೆ. 2 ವರೆ ಪೂಟ ರಸ್ತೆ ತೆಗ್ಗು ತಗೆದು ಪೈಪಲೈನ್ ಹಾಕುವ ಬದಲು ಕೆವಲ 1 ಪೂಟ್ ಪೈಪ್ ಹಾಕಿ ರಸ್ತೆ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರ ಸಭೆ ಕರೆಯಲಾಗುವುದು ಎಂದರು.
ಅಮರನಾಥ ಯಾತ್ರೆ ವೇಳೆ ಸಿಲುಕಿಕೊಂಡಿರುವ ಧಾರವಾಡ ಕ್ಷೇತ್ರದ ಕರಡಿಗುಡ್ಡ ಗ್ರಾಮದ ಯುವಕರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯಾ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದು, ಇವರಿಗೆ ಸುರಕ್ಷಿತವಾಗಿ ಇಂದು ಸಂಜೆ ರಾಜ್ಯಕ್ಕೆ ಹೆಲಿಕ್ಯಾಪ್ಟರ್ ಮೂಲಕ ಕರೆ ತರಲಾಗುವುದು ಎಂದರು.
ಅಲ್ಲದೇ ಕ್ಷೇತ್ರದಲ್ಲಿ ಪಿಡಬ್ಲೂಡಿ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಸಭೆ ಕರೆದು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಶಾಸಕನಾಗಿ ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ ಎಂದರು.