ಸ್ಥಳೀಯ ಸುದ್ದಿ
ಕಾರ್ಗಿಲ ವಿಜಯ ದಿನದಂದು ಮಾಜಿ ಸೈನಿಕರಿಗೆ ಸನ್ಮಾನ
ಧಾರವಾಡದಲ್ಲಿ ಸ್ಪರ್ಧಾತ್ಮಕ ಲೋಕದಲ್ಲಿ ಹೆಸರು ವಾಸಿಯಾಗಿರುವಂತಹ ಕ್ಲಾಸಿಕ್ ಕೋಚಿಂಗ್ ಸೆಂಟರ ವತಿಯಿಂದ ಮಾಜಿ ಸೈನಿಕರಿಗೆ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಇದೆ ವೇಳೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಎಸ್ ಉಪ್ಪಾರ್ ವಹಿಸಿದ್ದರು ಅವರು ಮಾತನಾಡಿ ಭಾರತ ದೇಶಕ್ಕೆ ಸೈನಿಕರ ಕೊಡುಗೆ ದೇಶದ ಗಡಿಯಲ್ಲಿ ಸೈನಿಕರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದರಿಂದ ನಾವು ದೇಶದ ಒಳಗಡೆ ಆರಾಮದಾಯಕ ಜೀವನ ಸಾಗಿಸುತ್ತಿದ್ದೇವೆ ಹಾಗೂ ಭಾರತಾಂಬೆಯ ಸೇವೆಯನ್ನು ಕಲ್ಪಿಸಲು ಅದು ಸಹ ಒಂದು ನಮ್ಮ ಜೀವನದ ಅದೃಷ್ಟ ಅದು ಎಲ್ಲರಿಗೂ ಸಿಗದಕ್ಕೂ ಸಾಧ್ಯವಿಲ್ಲ ಎಂದು ವೇದಿಕೆ ಮೇಲೆ ಇದ್ದಂತಹ ಮಾಜಿ ಸೈನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಇದೆ ವೇಳೆಯಲ್ಲಿ ಮಾಜಿ ಸೈನಿಕರಾದ ಬಸವರಾಜ ಸೊಣ್ಣದ ಹಾಗೂ ಸಾಯಿರಾಮ್ ಅಂಬಿಗೇರ .ಮತ್ತು ಅರವಿಂದ ರವರು ಭಾಗವಹಿಸಿದರು ಇನ್ನು ವಿದ್ಯಾರ್ಥಿ ಬಳಗ ಸಹಭಾಗವಹಿಸಿತು