CITY CRIME NEWSFestival Ganesh chaturthiTWINCITY

ದಾವತೆ ಇಸ್ಲಾಮಿಯ 27 ನೇ ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನ!

POWER CITY NEWS : HUBLI

ಹುಬ್ಬಳ್ಳಿ: ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಜಾಗೃತಿ ಮತ್ತು ವೃತ್ತಿ ಕೌಶಲ್ಯಾಭಿವೃದ್ದಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಸುನ್ನಿ ದಾವತೆ ಇಸ್ಲಾಮಿಯ(#dawateislamiindia are) 27 ನೇ ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನವನ್ನು ಫೆ.8 & 9 ರಂದು ಇಲ್ಲಿನ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಸುನ್ನಿ ದಾವತೆ ಇಸ್ಲಾಮಿ ಅಧ್ಯಕ್ಷರಾದ ಸಯ್ಯದ್ ಮೆಹಬೂಬ್ ಕಲೈಗಾರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನ್ನಿ ದಾವತೆ ಇಸ್ಲಾಮಿ ಅಂತರಾಷ್ಟ್ರೀಯ ಮಟ್ಟದ ಪಕ್ಷಾತೀತ ಸಂಸ್ಥೆಯಾಗಿದ್ದು, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ನಿರಂತರವಾಗಿ ಸಮಾಜದ ಏಳಿಗೆಗಾಗಿ ತನ್ನನ್ನು ತಾನು ತೊಡಗಿಸಿಕೊಂಡು ಹಲವು ವರ್ಷಗಳಿಂದ ಕಾರ್ಯನಿರ್ವವಹಿಸುತ್ತಲಿದೆ. ಅಲ್ಲದೆ ಸಾಮಾಜಿಕ ಪೀಡುಗಗಳಾದ ಮದ್ಯಪಾನ, (islam)ಗುಟುಕಾ, ಗಾಂಜಾ, ಅಫೀಮು ಹಾಗೂ ತಂಬಾಕು ಬಳಕೆಯ ನಿಷೇಧ, ಪರಿಸರ ಖಾಳಜಿ, ಮಣ್ಣು ಸಂರಕ್ಷಣೆ ಕುರಿತು ನಿರಂತರವಾಗಿ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಮುಖಿಯಾಗಿ ಕಾರ್ಯ ನಿರ್ವವಹಿಸುತ್ತ ಬಂದಿದೆ. ಇದರೊಂದಿಗೆ ಈ ಬಾರಿ ಶಿಕ್ಷಣದ ಜಾಗೃತಿ, ವೃತ್ತಿ ಕೌಶಲ್ಯಾಭಿವೃದ್ಧಿ, ಮಾನವಿಯ ಮೌಲ್ಯಗಳ ಕುರಿತು ತಿಳುವಳಿಕೆ ನೀಡುವ ಮುಖ್ಯ ಉದ್ದೇಶದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳನ ಇದಾಗಿದ್ದು, ಫೆ.8 ರಂದು ಬೆಳಿಗ್ಗೆ 10 ಗಂಟೆಗೆ ಮಹಿಳೆಯರ ಸಮ್ಮೇಳನವನ್ನು ಮುಂಬೈ ಮೂಲದ ಖ್ಯಾತ ನಾಥ್ ಮಾಯಕ ಖಾರಿ ಮಹಮ್ಮದ್ ರಿಜ್ವಾನಖಾನ್ ಉದ್ಘಾಟಿಸುವರು, ಸುನ್ನಿ ದಾವತೆ ಇಸ್ಲಾಮಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಾಲಸ್ಥ ಮಹಮ್ಮದ್ ಶಾಕೀರ್ ಅಲಿ(mahamad shakirali) ನೂರಿ, ಉತ್ತರ ಪ್ರದೇಶದ ಅಲ್ ಜಾಮಿತುಲ್ ಅಶ್ರಫಿಯಾ ವಿವಿ ಕುಲಪತಿ ಮುತ್ತಿ ನಿಜಾಮುದ್ದಿನ ಮಿಸಬಾಹಿ, ಮಹಾರಾಷ್ಟ್ರದ ಸಯ್ಯದ ಅಮಿನೂಲ್ ಖಾದ್ರಿ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಧುನಿಕ ದಿನಮಾನಗಳಲ್ಲಿ ಮಹಿಳೆಯರ ಸ್ಥಾನಮಾನ, ಮಹಿಳಾ ಸ್ವಾತಂತ್ರ್ಯ ಸಮಾನತೆ, ಶೈಕ್ಷಣಿಕ ಹಕ್ಕುಗಳ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಫೆ.9 ರಂದು ನಡೆಯಲಿರುವ ಪುರುಷರ ಸಮ್ಮೇಳನದಲ್ಲಿ ಮಧ್ಯಾಹ್ನ 2 ಗಂಟೆಗೆ ಸುನ್ನಿ ದಾವತ ಇಸ್ಲಾಮಿಯ ಅಂಗಸಂಸ್ಥೆ ಎಸ್ ಡಿ ಐ ಉಮ್ಮಿದ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಕರಿಯರ್ ಗೈಡನ್ಸ್ (ವೃತ್ತಿ ಕೌಶಲ್ಯ ತರಬೇತಿ) ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮೂಸಾ ಮಸ್ತಾನ ಕ್ಯಾಮಿಕಲ್ ಇಂಜನೀಯರ್ ವಿದ್ಯಾರ್ಥಿಗಳ ಗೊಂದಲದ ಪ್ರಶ್ನೆಗಳಿಗೆ ಉತ್ತರಿಸುವರು, ಹೈದರಾಬಾದ ಮೂಲದ ಅತೀಶ್ ಬಿನ್ ಸಾದ್ ಕುರೈಶಿ ಸಾಮಾಜಿಕ ಜಾಲ ತಾಣದ ಬಳಕೆ, ಸುರಕ್ಷತೆ ಮತ್ತು ಸೈಬರ್ ಅಪರಾಧಗಳು, ಡಾ. ಥಝಿಲತ್ ಹುಸೇನ್ ಆಧುನಿಕ ಶಿಕ್ಷಣ ಪದ್ದತಿ, ಪರೀಕ್ಷಾ ಸಿದ್ಧತೆ ಹಾಗೂ ಪರೀಕ್ಷೆಯಲ್ಲಿ ಎದುರಿಸಬೆಕಾದ ಸವಾಲುಗಳು ಕುರಿತು ಹಾಗೂ ರಬ್ಬಾನಿ ಮಾಜಿದಂಡಿ ಚಾರ್ಟರ್ಡ್ ಅಕೌಂಟೆಂಟ್ ಅವರು ವಾಸ್ತವಿಕ ವೃತ್ತಿ ಮತ್ತು ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ನೀಡಲಿದ್ದಾರೆ. ನಂತರ ಸಂಜೆವರೆಗೆ ಮುಖ್ಯ ಅತಿಥಿಗಳಿಂದ ಧಾರ್ಮಿಕ ಚಿಂತನೆ, ಸಾಮಾಜಿಕ ಸಹಿಷ್ಣುತೆ, ಪರೋಪಕಾರ, ಮತ್ತು ಸಮಯದ ಸದ್ಬಳಕೆ ಮತ್ತು ಸಮನ್ವಯತ ಕುರಿತು ಉಪನ್ಯಾಸ ನಡೆಯಲಿದೆ ಎಂದರು.

ವಾರ್ಷಿಕ ಸಮ್ಮೇಳನಕ್ಕೆ ಈಗಾಗಲೇ ಬೃಹತ್ ವೇದಿಕೆಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಮೈದಾನದ ಎರಡು ಬದಿಯಲ್ಲಿ ಅಚ್ಚುಕಟ್ಟಾದ ವಾಹನ ನಿಲಗಡೆ ವ್ಯವಸ್ಥೆ ಮಾಡಲಾಗಿರುತ್ತದೆ. ಸಮ್ಮೇಳನದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗಾಗಿ(contact) ಮೊ.8904008082 ಗೆ ಸಂಪರ್ಕಿಸುವಂತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಅಬ್ದುಲ್ ರಹಿಂ ಲಷ್ಕರ್, ಮಹಮ್ಮದ್ ಅಸ್ಲಂ ಮುಜಾಹಿದ್, ರಬ್ಬಾನಿ ಮಾಜಿದಂಡಿ, ಡಾ. ಫಝಿಲತ್ ಹುಸೇನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *