ಸ್ಥಳೀಯ ಸುದ್ದಿ
ಕಾಮುಕ ಶಿಕ್ಷಕನ ಮೇಲೆ ಪ್ರಕರಣ ದಾಖಲು
ಬೆಂಗಳೂರು
ಶಿಕ್ಷಕ ವೃತ್ತಿ ಎಂದ್ರೆ ಗುರುವಿನ ಸಮಾನ ಆದ್ರೆ ಇಲ್ಲೊಬ್ಬ ಕಾಮುಕ ಶಿಕ್ಷಕ ತನ್ನ ವೃತ್ತಿಗೆ ಅಗೌರವ ತೋರುವ ಕೆಲಸ ಮಾಡಿದ್ದಾನೆ.
ಇಂತಹ ಶಿಕ್ಷಕನ ಹೆಸರು ಅಜರ್ ಅಂತಾ. ಮೂಲತಂ ಧಾರವಾಡ ಜಿಲ್ಲೆಯವನಾದ ಇವನು ರಾಯಚೂರು ಜಿಲ್ಲೆಯಲ್ಲಿ ವೃತ್ತಿಯಿಂದ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದಾನೆ.
ಉದ್ಯೋಗಕ್ಕೆ ಹೋಗಿ ಬರಲು ಸಮೀಪವಾದ ಜಾಗವೆಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪೂರದಲ್ಲಿ ವಾಸವಿದ್ದು, ಇದೇ ಏರಿಯಾದ ಮಹಿಳೆಯೊಬ್ಬರ ಜೋತೆಗೆ ಇವರು ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆ ಸಧ್ಯ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಹಾಲಿ ವಸ್ತಿ ಇದ್ದು, ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಧ್ಯ ಆರೋಪಿ ಪರಾರಿಯಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ವಿದ್ಯಾರ್ಥಿಗಳ ಪಾಲಿಗೆ ಗುರುವಾಗಿ, ಮಾರ್ಗದರ್ಶಕನಾಗಿ ಇರುವ ಈತ, ಮಾಡಿದ್ದುಣ್ಣೋ ಮಾರಾಯಾ ಎನ್ನುವಂತೆ ಇನ್ನುಮುಂದೆ ಕಾನೂನಿನ ಚೌಕಟ್ಟಿನಲ್ಲಿ ಈ ಪ್ರಕರಣವನ್ನು ಎದುರಿಸಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.