ಧಾರವಾಡ

ಕಾನೂನು ವಿದ್ಯಾರ್ಥಿಗಳ ಹೋರಾಟ- ಹೈರಾಣಾದ ಲಾ ಯುನಿರ್ವಸಿಟಿ ಸಿಬ್ಬಂದಿ

ಧಾರವಾಡ-

ಧಾರವಾಡ ಜಿಲ್ಲೆಯ ನವನಗರದಲ್ಲಿರುವ ಲಾ ಯುನಿವರ್ಸಿಟಿಯಲ್ಲಿ ಕಾನೂನು ವಿದ್ಯಾರ್ಥಿಗಳು ಕಳೆದ 4-5 ದಿನಗಳಿಂದ ‌ನಿರಂತರವಾಗಿ ಹೋರಾಟ ‌ಮಾಡುತ್ತಾ ಬಂದಿದ್ದಾರೆ. ಹೋರಾಟ ಈಗಲೂ ನಡೆಯುತ್ತಿದೆ.

ಈ ಹೋರಾಟ ಏತಕ್ಕಾಗಿ ಹೋರಾಟದ ಉದ್ದೇಶ‌ ಏನು ಎನ್ನುವುದನ್ನು ಸ್ವಂತ ವಿದ್ಯಾರ್ಥಿಗಳೇ ಹೇಳಿದ್ದಾರೆ ನೋಡಿ…..

?ಕಾನೂನು ವಿದ್ಯಾರ್ಥಿಗಳಾದ ನಮ್ಮ ಈ ಅವಿರತ ಹೋರಾಟದ ಉದ್ದೇಶಗಳು ಇವುಗಳು…!
ಇವುಗಳು ಈಡೇರುವರೆಗೂ ನಾವು ನಮ್ಮ ಹೋರಾಟ ಕೈ ಬಿಡುವುದಿಲ್ಲ…!

?ನಮ್ಮ ಮೂರು ವರ್ಷದ ಕೋರ್ಸ್ ಮೂರು ವರ್ಷಕ್ಕೆ ಮುಗಿಯಬೇಕು…!
?ರಿವ್ಯಾಲುವೇಷನ್ ರೂಪದಲ್ಲಿ ಹಣಮಾಡಲು ಬಡ ಕಾನೂನು ವಿದ್ಯಾರ್ಥಿಗಳ ರಕ್ತ ಹೀರುತ್ತಿರುವ ಕೆಎಸ್‌ಎಲ್‌ಯೂದ ನರಿ ಬುದ್ದಿಯು ಕೊನೆಯಾಗಬೇಕು.
? ಹಿಂದಿನ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ಇವ್ಯಾಲ್ಯೂಯೇಷನ್‌ ಮಾಡಿ ಯೂನಿವರ್ಸಿಟಿಯೇ ತಪ್ಪು ಮಾಡಿ ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟ ಮಾಡದೇ ಅವರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ, ಅಂತಹ ವಿದ್ಯಾರ್ಥಿಗಳ ಫಲಿತಾಂಶ ಈ ಕೂಡಲೇ ಬರಬೇಕು ಮತ್ತು ಈ ತಪ್ಪಿಗೆ ಕಾರಣರಾದ ಯೂನಿವರ್ಸಿಟಿಯ ಪರೀಕ್ಷಾ ವಿಭಾಗದ ಅಧಿಕಾರಿಯನ್ನು ಆ ಹುದ್ದೆಯಿಂದ ವಿಮುಕ್ತಿ ಮಾಡಬೇಕು.


? ಕಾನೂನು ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಾದ ಉಪಕುಲಪತಿಗಳು ಆಫ್‌ಲೈನ್ ಎಕ್ಸಾಮ್ ನಡೆಸದಿದ್ದರೆ ಕೋರ್ಟ್ ಆದೇಶ ಉಲ್ಲಂಘನೆ ಎಂದು ಪತ್ರಿಕೆಗಳ ಮುಂದೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಈ ಮೂಲಕ ಹೈಕೋರ್ಟಿನ ತೀರ್ಪನ್ನು ತಮ್ಮ ಇಚ್ಛಾರೀತಿ ಊಹಿಸಿಕೊಂಡು ಮಾನ್ಯ ಹೈಕೋರ್ಟಿನ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು.
? ಸಂವಿಧಾನ ದತ್ತ ನಮ್ಮ ಪ್ರತಿಭಟಿಸುವ ಹಕ್ಕಿಗೆ ಬೆಲೆ ಕೊಡದ ಕೆಎಸ್‌ಎಲ್‌ಯೂದ ಅಧಿಕಾರಿಗಳು ಹಾಗೂ ವಿಸಿ ಈ ಕೂಡಲೆ ತಮ್ಮ ಹುದ್ದೆಯಿಂದ ತೊಲಗಬೇಕು.
? ನಮ್ಮ ಜೀವನದ ಅಮೂಲ್ಯ ಒಂದು ವರ್ಷ ಹಾಳಾಗದೆ ಮೂರು ವರ್ಷ ಮತ್ತು ಐದು ವರ್ಷಗಳಲ್ಲಿಯೇ ನಮ್ಮ ಅಧ್ಯಯನ ಮುಗಿಯಬೇಕು.
? ಪದೇ ಪದೇ ಯೂನಿವರ್ಸಿಟಿ ಮಾಡುತ್ತಿರುವ ಪ್ರಮಾದಗಳಿಂದ ರೀಪಿಟರ್ಸ್‌ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ, ಅವರಿಗೆ ಆಗಿರುವ ಸಮಸ್ಯೆಯನ್ನು ರೀಪಿಟರ್ಸ್‌ಗಳ ಭವಿಷ್ಯದ ದೃಷ್ಟಿಯಿಂದ ಪ್ರತ್ಯೇಕವಾಗಿ ಆದಷ್ಟು ಬೇಗನೆ ಪರಿಹರಿಸಬೇಕು.

ನಾವು ಪರೀಕ್ಷೆ ಬರೆಯದೆ ಪ್ರಮೋಟ್ ಮಾಡಿ ಎಂದು ಕೇಳುತ್ತಿಲ್ಲ, ನಮ್ಮ ಅಮೂಲ್ಯ ಜೀವನದ ಒಂದು ವರ್ಷ ಹಾಳಾಗಬಾರದು, ಬಡವರ ಮನೆಯ ಮಕ್ಕಳ ಹಣವನ್ನು ರಿವ್ಯಾಲುವೇಷನ್ ರೂಪದಲ್ಲಿ ಕೊಳ್ಳೆ ಹೊಡೆಯುವುದು ನಿಲ್ಲಬೇಕು, ನಮ್ಮ ಕನಸುಗಳು ಯೂನಿವರ್ಸಿಟಿಯ ದುರಾಡಳಿತದಿಂದ ಕಮರಿ ಹೋಗಬಾರದು ಎಂಬುದು ನಮ್ಮ ಹೋರಾಟದ ಉದ್ದೇಶ.

ವಿದ್ಯಾರ್ಥಿಗಳ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯ ಕೊಡದಿದ್ದರೆ ಈ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ, ಈ ಹೋರಾಟಕ್ಕೆ ತಮ್ಮ ತಪ್ಪುಗಳಿಂದ ಕಾರಣರಾದ ಪ್ರತಿಯೊಬ್ಬರೂ ತಮ್ಮ ತಮ್ಮ ಕುರ್ಚಿಗಳಿಂದ ಕೆಳಗಿಳಿವವರೆಗೂ ನಾವು ಬಿಡುವುದಿಲ್ಲ, ಇದು ಕೇವಲ ಸೂಚನೆಯಲ್ಲ ವಿದ್ಯಾರ್ಥಿಗಳ ಕಟುವಾದ ಎಚ್ಚರಿಕೆ ಎಂಬುದನ್ನು ಸಂಬಂಧಪಟ್ಟವರೆಲ್ಲ ಗಮನಿಸಲೇಬೇಕು.

ಮಾನ್ಯ ಉಪಕುಲಪತಿಗಳೇ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ ಅಥವಾ ಇದಕ್ಕೆ ತಕ್ಕುದಾದ ಬೆಲೆ ಕಟ್ಟುವ ಸಮಯವನ್ನು ನಾವು ವಿದ್ಯಾರ್ಥಿಗಳೆಲ್ಲ ಕೂಡಿ ಉಗ್ರ ಹೋರಾಟದ ಮೂಲಕ ಮಾಡೇ ಮಾಡುತ್ತೇವೆ.

ಈ ಹೋರಾಟ ಆರಂಭ ಅಷ್ಟೇ, ಸಹೃದಯಿ ಸ್ನೇಹಿತ-ಸ್ನೇಹಿತಿಯರೆ ಕಾನೂನು ವಿದ್ಯಾರ್ಥಿಗಳಾದ ನಾವು ಈ ಹೋರಾಟದಲ್ಲಿ ಗೆದ್ದೆ ಗೆಲ್ಲುತ್ತೇವೆ. ಗೆಲ್ಲುವವರೆಗೆ ನಾವು ಈ ಹೋರಾಟದಿಂದ ಹಿಂದೆ ಸರಿಯದಿರೋಣ.

ಎಂದು ವಿದ್ಯಾರ್ಥಿಗಳು ನಿರ್ಧಾರ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *