ಕಾಂಗ್ರೇಸ್ ಮುಖಂಡರನ್ನ ಎಳೆದೊಯ್ದ: ಪೊಲಿಸರು!
ಹುಬ್ಬಳ್ಳಿ
ಆಡಳಿತ ಸರ್ಕಾರ ಬಿಜೆಪಿ ಪಕ್ಷದಿಂದ ವಿರೋಧ ಪಕ್ಷ ಕಾಂಗ್ರೆಸ್ ಅನುಸರಿಸುತ್ತಿರುವ ವೀರೋದಿ ನೀತಿ ಖಂಡಿಸಿ ಪ್ರತಿಭಟನಾ ಪೂರ್ವ ಭಾವಿ ಸಭೆ ಇಲ್ಲಿನ ದೇಶಪಾಂಡೆ ನಗರದಲ್ಲಿ ನಡೆಯುತ್ತಿದೆ.
ಬಿಜೆಪಿಯ ಪೂರ್ವ ಭಾವಿ ಸಭೆಗೆ ಆಗಮಿಸುವ ಕೇಂದ್ರ ಸಚಿವರು, ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನೊಳಗೊಂಡಂತೆ.
ಆಡಳಿತ ಸರಕಾರವೆ ಕಾಂಗ್ರೆಸ್ ವಿರುಧ್ದ ಪ್ರತಿಭಟನೆ ನಾಳೆ ನಾಡಿದ್ದು ನಡೆಯ ಬೆಕಿರುವ ಪರ್ತಿಭಟನೆಯ ಕುರಿತು. ಬಿಜೆಪಿಯು ಪೂರ್ವ ಭಾವಿ ಸಭೆ ಕರೆದಿರುವ ಹಿನ್ನೆಲೆಯಲ್ಲಿ. ಬಿಜೆಪಿ ನಾಯಕರನ್ನು ಅನುಕಿಸುವಂತೆ “ಹೂ” ಕೊಡುವ ಕಾರ್ಯಕ್ರಮ ಕಾಂಗ್ರೆಸ್ಸಿಗರು ಹಮ್ಮಿಕೊಂಡಿದ್ದರು.
ಆದ್ರೆ ಇದಕ್ಕೆ ಅನುಮತಿ ನೀಡದ ಎಸಿಪಿ ಮುಕ್ತೆದಾರ್. ಪ್ರತಿಭಟನಾ ನಿರತರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಸರ್ಕಿಟ್ ಹೌಸ್ ನಲ್ಲಿ ನಡೆಯಿತು.
ಆದ್ರೆ “ಹೂ” ಕೊಡುವ ಕಾರ್ಯಕ್ರಮಕ್ಕೆ ಪೊಲಿಸರು ಅನುಮತಿ ನೀಡದ ಹೊರತಾಗಿಯೂ ಬಿಜೆಪಿಯ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸ್ಥಳದಿಂದ ಅಣತಿ ದೂರದಲ್ಲಿಯ ವರೆಗೂ ಬಂದ ಕಾಂಗ್ರೆಸ್ ಮುಖಂಡರಾದ, ದೀಪಾ ಗೌರಿ,ಪ್ರಕಾಶ ಕ್ಯಾರಕಟ್ಟಿ, ಆರೀಪ್ ಭದ್ರಪೂರ್,ಸೆಂದಿಲ್ ಕುಮಾರ್ ಮತ್ತು ರಜತ ಉಳ್ಳಗಾಡ್ಡಿಮಠ,ಆಕಾಶ ಕೊನೇರಿ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಇದೆ ವೇಳೆ ಅದೆ ಮಾರ್ಗವಾಗಿ ಸಭೆಗೆ ಹೊಗುತ್ತಿದ್ದ ಮಾಜಿ ಮೇಯರ್ ಪಾಂಡುರಂಗ್ ಪಾಟೀಲ್ ಅವರಿಗೆ ಆರೀಫ್ ಭದ್ರಾಪೂರ ಆಕಾಶ್ ಕೊನೇರಿ, ಮತ್ತು ಪ್ರಕಾಶ್ ಕ್ಯಾರಕಟ್ಟಿ “ಹೂ” ನೀಡಿ ಮುಜುಗರವುಂಟು ಮಾಡಿದರು. ಆದ್ರೆ “ಹೂ” ಪಡೆದ ಪಾಂಡುರಂಗ ಪಾಟೀಲ್ ನಸು ನಗುತ್ತಲೆ ಸಭೆಯತ್ತ ಮುಂದೆ ನಡೆದರು.
ಆದ್ರೆ ಪೊಲಿಸರು ಕಾಂಗ್ರೆಸ್ ಕಾರ್ಯಕರ್ತರನ್ನ ಮನವೊಲಿಸಿ ಪೊಲಿಸ್ ವ್ಯಾನ್ ನಲ್ಲಿ ಹತ್ತಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಬ್ರೇಕ್ ನೀಡಿದರು.
ಮತ್ತೊಂದೇಡೆ ದೀಪಾ ಗೌರಿ ಹಾಗೂ ಜ್ಯೋತಿ ವಾಲಿಕಾರ ಮಾಧ್ಯಮ ಕುರಿತು ಹೇಳಿಕೆ ನೀಡುತ್ತಿರುವ ಸಂಧರ್ಭದಲ್ಲೆ ಮಹೀಳಾ ಪೊಲಿಸರು ವಶಕ್ಕೆ ಪಡೆದು ಪೊಲಿಸ್ ವ್ಯಾನಮೂಲಕ ಸಿಆರ್ ಮೈದಾನಕ್ಕೆ ಕರೆದೊಯ್ದರು.
ಈ ವೇಳೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಂತೆ ಸ್ಥಳದಲ್ಲಿ ಬಿಗಿ ಬಂದೊಬಸ್ತ್ ಒದಗಿಸಿರುವ ಎಸಿಪಿ ವಿನೋದ್ ಮುಕ್ತೆದಾರ್ ಉಪನಗರ ಠಾಣೆಯ ರವಿಚಂದ್ರ,ವಿದ್ಯಾನಗರ ಠಾಣೆಯ ಮಹಾಂತೇಶ ಹೂಳಿ ಸೆರಿದಂತೆ 50ಕ್ಕೂ ಹೆಚ್ಚಿನ ಸಿಬ್ಬಂದಿಗಳು ಸ್ಥಳದಲ್ಲಿದ್ದರು.