ಕಾಂಗ್ರೆಸ್ ಮುಖಂಡನ ಮೇಲೆ ಕಳ್ಳತನದ ಆರೋಪ ಮಾಡಿದ : ಸುವರ್ಣಲತಾ.ಜಿ!
ಹುಬ್ಬಳ್ಳಿ: ಶಿಕ್ಷಣ ಸಿರಿ ಸಮೂಹ ಸಂಘಸಂಸ್ಥೆಗಳ ವಕೀಲರ ಕಾರಿನ ಗಾಜು ಒಡೆದು ಹಣ ಕಳ್ಳತನ ವಾಗಿದೆ,ಎನ್ನಲಾದ ಘಟನೆ ಗಿರಣಿ ಚಾಳದ ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪದ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.
14/01/2023 ರಂದು ನಗರದ ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪದ ಬಳಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸುವರ್ಣಲತಾ ಗದಿಗೆಪ್ಪಗೌಡರಗೆ ಸೇರಿದ (ಆಲ್ಟೋ ಕೆ10) ka25mb5617 ನೊಂದಣಿಯ ಕಾರನ್ನು ಪಾರ್ಕ್ ಮಾಡಿದ್ದ ವೇಳೆಯಲ್ಲಿ ಗಿರಣಿಚಾಳ ನಿವಾಸಿಯಾದ ಕಾಂಗ್ರೆಸ್ ಮುಖಂಡ ಮೋಹನ ಹೀರೆಮನಿ ಎಂಬಾತ ಕಾರಿನ ಗಾಜು ಒಡೆದು ಹಾಕಿದ್ದಲ್ಲದೆ, ಕಾರಿನಲ್ಲಿರಿಸಿದ 10,000.ರೂ.ಗಳನ್ನು ಸಹ ತೆಗೆದುಕೊಂಡು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಯೊಡ್ಡಿದ್ದಾನೆ.
ಎಂದು ಆರೋಪಿಸಿ ಶಿಕ್ಷಣ ಸಿರಿ ಸಮೂಹದ ವಕಿಲರು ಎನ್ನಲಾದ ಸುವರ್ಣಲತಾ ಗದಿಗೆಪ್ಪಗೌಡರ್ ಅವರು 15/01/2023ರಂದು ಉಪನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರೆ ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆಯ ಪೊಲಿಸರು ಇದುವರೆಗೂ ಮೋಹನ್ ಹಿರೇಮನಿಯ ಮೇಲೆ ಯಾವುದೆ ಕಾನೂನು ಕ್ರಮ ಜರುಗಿಸಿಲ್ಲ ವೆಂದು ಪೊಲಿಸರ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಆದ್ರೆ ಘಟನೆ ನಡೆದು ಮೂರು ದಿನಗಳಾದರು ಕಾಂಗ್ರೇಸ್ ಮುಖಂಡ ಮೋಹನ ಹಿರೇಮನಿ ಮಾತ್ರ ಮೌನವಾಗಿರುವುದರ ಹಿಂದಿನ ಬೆಳವಣಿಗೆಗಳಾವು? ಪೊಲಿಸರೆ ಘಟನೆಯ ಸತ್ಯ ಹೊರಹಾಕಬೆಕಿದೆ.