ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಐಟಿ ದಾಳಿ ವಿಚಾರ-ಶಿವಲೀಲಾ ಕುಲಕರ್ಣಿ ಸುದ್ದಿಗೋಷ್ಠಿ
ಧಾರವಾಡ
ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಶಿವಗಿರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಐಟಿ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ವಿನಯ ಕುಲಕರ್ಣಿ ಆಪ್ತ ಪ್ರಶಾಂತ, ಈಶ್ವರ ಶಿವಳ್ಳಿ, ಏಗನಗೌಡರ, ಪ್ರದೀಪ ಮೇಲೆ ಐಟಿ ದಾಳಿ ಮಾಡಲಾಗಿದೆ
ವಿನಯ ಕುಲಕರ್ಣಿ ಪರವಾಗಿ ಸ್ಟೆಟಸ್ ಹಾಕಿಕೊಂಡ್ರೆ ೧೦೭ ಸೆಕ್ಷನ್ ಕೇಸ್ ಹಾಕಲಾಗುತ್ತಿದೆ
ಬಿಸ್ನೆಸ್ ಬಗ್ಗೆ ಪ್ರಶ್ನೆ ಕೇಳೋದನ್ನ ಬಿಟ್ಟು ಪಕ್ಷದ ಸ್ಟ್ಯಾಟರ್ಜಿ ಬಗ್ಗೆ ಪ್ರಶ್ನೆ ಕೇಳ್ತಿದ್ದಾರೆ.
ನಿಮ್ಮ ಸ್ಟ್ಯಾಟರ್ಜಿ ಏನು, ಸೋರ್ಸ್ ಎಲ್ಲಿಂದ ಬರ್ತಾ ಇದೆ ಅಂತ ಕೇಳ್ತಾರೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಯಾಕೆ ಬಂದ್ರಿ ಅನ್ನೋ ಪ್ರಶ್ನೆ
ಕಾರ್ಯಕರ್ತರನ್ನು ಎರಡು ದಿವಸಗಳಷ್ಟು ಹಿಡಿದು ಕೂರಿಸಿ, ಚುನಾವಣೆಯಲ್ಲಿ ಕೆಲಸ ಮಾಡದಂತೆ ಹತ್ತಿಕ್ಕಲಾಗುತ್ತಿದೆ ಎಂದರು.
ಇದು ರಾಜಕೀಯ ಷಡ್ಯಂತ್ರ ಆಲ್ವಾ? ಚುನಾವಣೆ ವೇಳೆ ಈ ರೀತಿ ಮಾಡೋದು ಎಷ್ಟು ಸರಿ?
ಇದಕ್ಕೆ ಉತ್ತರ ಕ್ಷೇತ್ರದ ಜನರೇ ಕೊಡಬೇಕು.
ರಾಜಕೀಯವಾಗಿ ಹತ್ತಿಕುವ ಕೆಲಸ ಮಾಡಲಾಗುತ್ತಿದೆ.
ಚುನಾವಣೆ ವೇಳೆ ನಮಗೆ ಡಿಸ್ಟರ್ಬ್ ಮಾಡಲು ಈ ರೀತಿ ಮಾಡಲಾಗುತ್ತಿದೆ.
ಅಧಿಕಾರಿಗಳು ಬಿಜೆಪಿ ಏಜೆಂಂಟ್ ರಂತೆ ವರ್ತನೆ ಮಾಡುತಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳು ಯಾರೂ ಸ್ಪಂದನೆ ಮಾಡ್ತಿಲ್ಲಾ.
ವಿನಯ ಕುಲಕರ್ಣಿ ಜಿಲ್ಲೆಯ ಹೊರಗಡೆ ಇದ್ದಾರೆ ನಾವೇನ್ ಮಾಡಿದ್ರು ನಡಿಯುತ್ತೆ ಅನ್ನೋ ರೀತಿ ಅಧಿಕಾರಿಗಳ ವರ್ತನೆ ಇದೆ
ಇದು ಸ್ವಯಂ ಪ್ರೇರಿತ ದಾಳಿ ಅಲ್ಲಾ, ಬಿಜೆಪಿಯವರೇ ಮಾಡಿಸುತ್ತಿರುವಂತ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.