ಸ್ಥಳೀಯ ಸುದ್ದಿ
ಕಲಘಟಗಿ ಮತಕ್ಷೇತ್ರದಲ್ಲಿ ಭವಿಷ್ಯದ ನಾಯಕನ ಎಂಟ್ರಿ
ಧಾರವಾಡ
ಕಲಘಟಗಿ ಮತಕ್ಷೇತ್ರದ ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಯುವನಾಯಕನ ಎಂಟ್ರಿಯಾಗಿದೆ.
ಕನ್ನಡಪರ ಸಂಘಟನೆಯಲ್ಲಿ ಗುರುತಿಸಿಕೊಂಡು ನಾಡು ನುಡಿಗೆ ಕೆಲಸ ಮಾಡುತ್ತಿರುವ ಈ ಯುವ ನಾಯಕನ ಹೆಸರು ಗಿರೀಶ ಪೂಜಾರ.
ಧಾರವಾಡ ಜಿಲ್ಲೆಯ ಮನಸೂರು ಗ್ರಾಮದ ಇವರು ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಯಾಗಿದ್ದು, ಪಕ್ಷದ ಜಿಲ್ಲೆಯ ಜವಾಬ್ದಾರಿ ಹೊಂತು ನಿಂತಿರುವ ಗುರುರಾಜ ಹುಣಶಿಮರದ ಜೋತೆಗೆ ಹೆಗಲು ಕೊಟ್ಟು ಪಕ್ಷದ ಬೆಳವಣಿಗೆಗೆ ಶ್ರಮವಹಿಸುತ್ತಿದ್ದಾರೆ.
ನಿಖಿಲ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ , ಮಾಜಿ ಪ್ರಧಾನಿ ದೇವೆಗೌಡರ ಅಭಿಮಾನಕ್ಕೆ ಸೋತು ಜೆಡಿಎಸ್ ಪಕ್ಷಕ್ಕೆ ಸೇರಿರುವ ಗಿರೀಶ ಪೂಜಾರ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಬಗ್ಗೆ ವಿಶೇಶ ಕಾಳಜಿ ವಹಿಸಿದವರು.
ಕಲಘಟಗಿ ಮತಕ್ಷೇತ್ರದಲ್ಲಿ ನಿರಂತರ ಜನರೊಂದಿಗೆ ಸಂಪರ್ಕ ಹೊಂದಿರುವ ಗಿರೀಶ ಪೂಜಾರ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಜನರ ಸೇವೆ ಮಾಡುವ ಇಚ್ಚೆ ಹೊಂದಿದ್ದಾರೆ.