ಸ್ಥಳೀಯ ಸುದ್ದಿ
ಕರಡಿಗುಡ್ಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ
ಧಾರವಾಡ
ಧಾರವಾಡ ತಾಲೂಕಿನ ಸುಕ್ಷೇತ್ರ ಕರಡಿಗುಡ್ಡ ಗ್ರಾಮದಲ್ಲಿ 12ನೇ ಶತಮಾನದ ಕನ್ನಡದ ತತ್ವ ಜ್ಞಾನಿ ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಅನಾವರಣ ಮಾಡಲಾಯಿತು.
ಉಪ್ಪಿನಬೆಟಗೇರಿಯ ಶ್ರೀ ಮ.ನಿ.ಪ್ರ.ಕುಮಾರವಿರುಪಾಕ್ಷ ಮಹಾಸ್ವಾಮಿಗಳು ದಿವ್ಯಸಾನಿಧ್ಯದಲ್ಲಿ ಹಾಗೂ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಹಾಗೂ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಸೇರಿದಂತೆ,
ಗ್ರಾಮದ ಗುರು ಹಿರಿಯರು ಅಣ್ಣ ತಮ್ಮಂದಿರು ಹಾಗೂ ಯುವ ಮಿತ್ರರೊಂದಿಗೆ ಜಗದ್ಗುರು ಬಸವೇಶ್ವರರ ಪುತ್ಥಳಿಯನ್ನು ಅನಾವರಣ ಕಾರ್ಯಕ್ರಮ ನಡೆಯಿತು.