ಕಣವಿ ಅಜ್ಜನ ಪ್ರೀತಿಯ ಗೋಪಿಗೂ ಸಿಗುತ್ತಿದೆ ಗೌರವ
ಧಾರವಾಡ
ಚೆಂಬೆಳಕಿನ ಕವಿ ಡಾ.ಚೆನ್ನವೀರ ಕಣವಿ ಅವರ ಆರೋಗ್ಯದ ಗುಟ್ಟು ವಾಕಿಂಗ್. ಬೆಳಿಗ್ಗೆ ಹಾಗೂ ಸಂಜೆ ತಪ್ಪದೇ ವಾಕಿಂಗ್ ಮಾಡುತ್ತಿದ್ದ ಡಾ.ಚೆನ್ನವೀರ ಕಣವಿ ನಮಗೆಲ್ಲಾ ನೆನಪು ಮಾತ್ರ.
ಇಂತಹ ಹಿರಿಯ ಕವಿಯ ಅತಿ ಹೆಚ್ಚು ಒಡನಾಟ ಇದಿದ್ದು, ಅವರು ಸಾಕಿ ಬೆಳೆಸಿದ ಶ್ವಾನಕ್ಕೆ ಮಾತ್ರ.
ಗೋಪಿ ಎನ್ನುವ ಶ್ವಾನ ಎಂದ್ರೆ ಚೆನ್ನವೀರ ಕಣವಿ ಅಜ್ಜನಿಗೆ ಎಲ್ಲಿಲ್ಲದ ಪ್ರೀತಿ, ಬೆಳಿಗ್ಗೆ ಎದ್ದು ವಾಕಿಂಗ್ ಹೊರಟರೆ ಕಣವಿ ಅಜ್ಜ, ಅವರ ಹಿಂಬಾಲಿಸುತ್ತಾ, ಗೋಪಿ ಎನ್ನುವ ಪ್ರೀತಿಯ ಶ್ವಾನ ಹಿಂದೆ ಹಿಂದೆ ಹೋಗುತ್ತಿತ್ತು.
ಇತ್ತೀಚಿಗೆ ಕಳೆದ 2 ವರ್ಷದ ಹಿಂದೆಯಷ್ಟೇ ಗೋಪಿ ಎನ್ನುವ ಶ್ವಾನ ತೀರಿ ಹೋದಾಗ ಮನೆಯ ಹಿತ್ತಲಿನಲ್ಲಿ ಅದಕ್ಕೆ ಅಂತ್ಯಸಂಸ್ಕಾರ ಮಾಡಿದ್ದಾರೆ. ದಿನವೂ ಅಲ್ಲಿ ಪೂಜೆ ಮಾಲಾಗುತ್ತೆ. ಇನ್ನು ಕಣವಿ ಅಜ್ಜನಿಗೂ ಶ್ವಾನಕ್ಕೂ ಇರುವ ಪ್ರೀತಿಯನ್ನು ಅರೆತಿರುವ ಕುಟುಂಬಸ್ಥರು ಮನೆಯ ಯಜಮಾನ ತೀರಿ ಹೋದ ಬಳಿಕ ಮನೆಯ ಮುಂದೆ ಶ್ವಾನದ ಜೋತೆಗೆ ಇರುವ ಫೋಟೊವೊಂದನ್ನು ಹಾಕಿ ಅದನ್ನು ಗೌರವಿಸುವ ಕೆಲಸ ಮಾಡುತ್ತಿದ್ದಾರೆ.
ನೀಜಕ್ಕೂ ಮಾತು ಬಾರದ ಪ್ರಾಣಿಗಳು ನಂಬಿಕೆ ಇಟ್ಟರೆ ಎಷ್ಟರ ಮಟ್ಟಿಗೆ ಮನೆ ಯಜಮಾನನ್ನು ಕಾಪಾಡುತ್ತೆ ಎನ್ನುವದನ್ನು ಅರಿತಿದ್ದರು ಕಣವಿ ಅಜ್ಜ. ಹೀಗಾಗಿ ತಮ್ಮ ಮನೆಯ ಸುತ್ತಲೂ ಎಲ್ಲಿಯೇ ಹೋದ್ರೂ ಈ ಶ್ವಾನ ಅವರನ್ನು ಹಿಂಬಾಲಿಸುವುದು ಸಾಮಾನ್ಯವಾಗಿತ್ತು.
ಮನೆಯ ಹಿರಿಯ ಜೀವವನ್ನು ಕಳೆದುಕೊಂಡಿರುವ ಕುಟುಂಬಸ್ಥರು, ನಿತ್ಯವೂ ಶ್ವಾನದ ಪ್ರೀತಿಯನ್ನು ಹಾಗೂ ಅಜ್ಜನ ಪ್ರೀತಿಯನ್ನು ನೆನೆಯುತ್ತಾ ದಿನ ಕಳೆಯುವಂತೆ ಆಗಿದೆ.