ಕಗ್ಗತ್ತಲೆಯಲ್ಲೇ ಕರ್ತವ್ಯಕ್ಕೆ ತೆರಳುವ ಕಿಮ್ಸ್ ಕರೋನಾ ವಾರಿಯರ್ಸ್ ಗಳು!
ಹುಬ್ಬಳ್ಳಿ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮಹೀಳಾ ಕರೋನಾ ವಾರಿಯರ್ಸ್ ಗಳ ಗೋಳು ಎಂಥದು ಗೊತ್ತಾ?
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕರೋನಾ ವಾರಿಯರ್ಸ್ ಗಳು ಎನಿಸಿಕೊಂಡಿರುವ. ಇಲ್ಲಿನ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದಂತಾಗಿದೆ. ರಾಜ್ಯದ ಮೂಲೆ ಮೂಲೆ ಗಳಿಂದ ವಿವಿಧ ಖಾಯಿಲೆಗಳನ್ನು ಹೊತ್ತು ಬರುವ ಮತ್ತು ಅಪಘಾತಕ್ಕಿಡಾಗಿ ಅಡ್ಮೀಟ್ ಅಗುವ ರೋಗಿಗಳನ್ನು ಉಪಚರಿಸಿ ಕಾಪಾಡುವ ಇಲ್ಲಿನ ವೈದ್ಯರು ಸಾಕ್ಷಾತ್ ಶ್ರೀಮನ್ ನಾರಾಯಣ ಸ್ವರೂಪಿಯಂತೆ ರೋಗಿಗಳಿಗೆ ಸ್ಪಂದಿಸ್ತಾರೆ.
ಇನ್ನೂಳಿದ ಹಾಗೆ ರೋಗಿಗಳನ್ನ ಬೇಗ ಗುಣಮುಖರಾಗಿಸಲು ಪ್ರಮುಖ ಪಾತ್ರ ವಹಿಸುವ ಶುಶ್ರೂಷಕ ಸಿಬ್ಬಂದಿಗಳು ಕೂಡ ಅಷ್ಟೆ.
ಆದರೆ ಅವರಗಿರುವ ವಾಸದ ಮನೆಗಳು ಮತ್ತು ರಸ್ತೆಗಳ ಸಮಸ್ಯೆಗಳೂ ಸಾಕಷ್ಟೀವೆ.
ವಿದ್ಯಾನಗರದ ಪೊಲಿಸ್ ಠಾಣೆ ವ್ಯಾಪ್ತಿಗೆ ಬರುವ ಕಿಮ್ಸ್ ಕ್ಯಾಂಪಸ್ ನಲ್ಲಿ ಮನೆಗಳ ಕಳ್ಳತನ, ವಾಹನ ಕಳ್ಳತನ ಸೆರಿದಂತೆ ಹಲವು ಘಟನೆಗಳು ಇಲ್ಲಿ ನಡೆದಿವೆ. ಆದರೂ ಸಹ ಭದ್ರತೆ ಇಲ್ಲ.
ಸಂಜೀವ ಮೆಡಿಕಲ್ ಮಾರ್ಗವಾಗಿ ಕಾಟಾ ಮಾರ್ಕೆಟ್ ಮೂಲಕ ಸೇರುವ ಮಾರ್ಗದಲ್ಲಿರುವ, ದೀಪಾ ಲೇಡಿಸ್ ಹಾಸ್ಟೆಲ್ ಮತ್ತು ಬ್ಲಾಕ್ ನಂಬರ 7 ಶುಶ್ರೂಷಕರ ನಿವಾಸ ಸ್ಥಳ ಹಾಗೂ, ಸುಧಾಮೂರ್ತಿಯವರು ಕಟ್ಟಿಸಿದ ಧರ್ಮಶಾಲೆಯ ಸಂಪರ್ಕಕ್ಕೆ ಕೂಡ ಇದೆ ರಸ್ತೆ ಬಳಕೆ ಯಾಗುತ್ತೆ.
ಸಂಜೆಯಾದರೆ ಸಾಕು ದಟ್ಟನೆಯ ಕತ್ತಲು ಆವರಿಸಿ ಬಿಡುತ್ತೆ. ಕಳ್ಳಕಾಕರಿಗೆ ಹೇಳಿ ಮಾಡಿಸಿದ ರಸ್ತೆಯಂತೆ ಮಾರ್ಪಡುತ್ತದೆ. ರಾತ್ರಿ ಪಾಳಿ ಕೆಲಸಕ್ಕೆ ಹೋಗುವ ಮಹೀಳಾ ಶುಶ್ರೂಷಕರಂತೂ. ಭಯದಲ್ಲೇ ಕತ್ತಲೆಯ ಈ ರಸ್ತೆ ಪಾರು ಮಾಡಿದ ಬಳಿಕವೆ ಸುಸಜ್ಜಿತ ದ್ವೀಪ ಅಳವಡಿಸಿರುವ ಕಿಮ್ಸ್ ಒಪಿಡಿ ಆವರಣದಿಂದ ಬೀಳು ಬೆಳಕಿನ ಸಹಾಯ ಪಡೆದು ಕರ್ತವ್ಯಕ್ಕೆ ಮುಂದೆ ಸಾಗ್ತಾರೆ.
ಇದರ ಬಗ್ಗೆ ಸಾಕಷ್ಟು ದೂರು ನಿಡಿದರು. ಇಲ್ಲಿನ ಆಡಳಿತ ಮಂಡಳಿ ಅಧಿಕಾರಿಗಳು ಮಾತ್ರ ಸೌಕರ್ಯ ಕಲ್ಪಿಸಿ ಕೊಡಲು ನಿರಾಸಕ್ತಿ ತೋರಿಸುತ್ತಿದೆ.
ಕಿಮ್ಸ್ ಆಡಳಿತ ವಿಭಾಗದ ಖಡಕ್ ಮಹೀಳಾ ಅಧಿಕಾರಿ ಎನಿಸಿಕೊಂಡವರು. ಇಲ್ಲಿನ ಈ ಗೋಳನ್ನ ಸರಿಪಡಿಸುವರೆ ಅಥವಾ ಪಾಲಿಕೆ ಅಧಿಕಾರಿಗಳು ಇದರ ಕುರಿತು ಗಮನ ಹರಿಸುವರೆ? ಅಥವಾ ಇಂತಹ ಸಣ್ಣ ಪುಟ್ಟ ಸೌಕರ್ಯಗಳಿಗೂ ಅಲ್ಲಿನ ಕರೋನಾ ವಾರಿಯರ್ಸ್ ಗಳು ರಸ್ತೆಗೆ ಬರಬೇಕೆ? ಅವರೆ ನಿರ್ಧರಿಸಲಿ!.