ಐಇಎಂಎಸ್ ಬಿ-ಸ್ಕೂಲ್‌ನಲ್ಲಿ ಉತ್ತರ ಕರ್ನಾಟಕ ಕರಿಯರ್ ಕಾನ್‌ಕ್ಲೇವ್ ಉದ್ಘಾಟನಾ ಸಮಾರಂಭ
ಹುಬ್ಬಳ್ಳಿ
ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಹುಬ್ಬಳ್ಳಿಯು ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಸಹಯೋಗದಲ್ಲಿ ದಿನಾಂಕ 05.08.2023 ರಂದು ತನ್ನ ಕ್ಯಾಂಪಸ್‌ನಲ್ಲಿ ಉತ್ತರ ಕರ್ನಾಟಕ ಕೆರಿಯರ್ ಕಾನ್ಕ್ಲೇವ್-2023 ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀಮತಿ ಗೀತಾ ಸಿ ಡಿ ಅವರು ತಮ್ಮ ಸ್ಪೂರ್ತಿದಾಯಕ ಭಾಷಣದಲ್ಲಿ ಮತ್ತೊಬ್ಬರನ್ನು ನಕಲು ಮಾಡುವ ಬದಲು ತಮಗೆ ಇಷ್ಟವಾದ ಕನಸನ್ನು ಬೆನ್ನಟ್ಟುವ ಬಗ್ಗೆ ಪ್ರಸ್ತಾಪಿಸಿ, ನಮ್ಮ ಗ್ರಾಮೀಣ ಭಾರತದ ಸಾಂಪ್ರದಾಯಿಕ ಜೀವನಶೈಲಿಯನ್ನು ಅಭ್ಯಾಸ ಮಾಡುವಲ್ಲಿ ವಿಫಲವಾಗಿದ್ದೇವೆ, ಈಗ ನಮ್ಮ ಮಕ್ಕಳು ಸಾಂಪ್ರದಾಯಿಕ ಶಾಲೆಗಳಿಂದ ಗಂಟೆಗಳ ಆಧಾರದಲ್ಲಿ ಹಣವನ್ನು ಪಾವತಿಸಿ ದೇಶಿಯ ವಿದ್ಯೆಗಳನ್ನೂ ಕಲಿಯುತ್ತಿದ್ದಾರೆ ಆದರೆ ನಮ್ಮ ಹಿರಿಯರು ತಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನೆಲ್ಲ ಮೈಗೂಡಿಸಿಕೊಂಡಿದ್ದರು , ಉದಾಹರಣೆಗೆ ಹೆಣ್ಣಿಗೆ, ಹೊಲಿಗೆ, ಪೇಂಟಿಂಗ್, ಡ್ರಾಯಿಂಗ್ ಇತ್ಯಾದಿಗಳು ಈ ಪೀಳಿಗೆಯಲ್ಲಿ ಅವುಗಳೆಲ್ಲ ಮೊಬೈಲ್ ಆಟಗಳಿಂದ ಆವರಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟರು .
ಉತ್ತಮ ಮಾರ್ಗದರ್ಶನದೊಂದಿಗೆ ಸರಿಯಾದ ವಯಸ್ಸಿನಲ್ಲಿ ತಗೆದುಕೊಂಡ ನಿರ್ಧಾರವು ಖಂಡಿತವಾಗಿಯೂ ಉತ್ತಮ ವೃತ್ತಿ ಆಯ್ಕೆಗಳೊಂದಿಗೆ ಕೊನೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಕೈಜೆನ್ ಎಡುಪ್ಲಸ್ ಸೊಸೈಟಿಯ ಗೌರವಾಧ್ಯಕ್ಷರಾದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಡಾ.ಎನ್.ಎ.ಚರಮತಿಮಠ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ , ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಮನಸ್ಸು ಮಾಡುವುದು ಯಶಸ್ಸಿನ ಮೊದಲ ಮಂತ್ರವಾಗಿದೆ. ಸ್ನೇಹಿತರು, ಕುಟುಂಬ, ಸಂಬಂಧಿಕರೊಂದಿಗೆ ಸೌಹಾರ್ದಯುತ ಸಂಬಂಧವು ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ನಿರ್ಣಾಯಕ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಒಬ್ಬ ಮಾರ್ಗದರ್ಶಕನನ್ನು ಹೊಂದಿರಬೇಕು.
ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಯನ್ನು ಆಯ್ಕೆ ಮಾಡಲು ಮಾರ್ಗದರ್ಶನ ನೀಡಲು ಯಾವಾಗಲೂ ಸಿದ್ಧವಿದೆ , ಪ್ರತಿ ವರ್ಷ ಕಾಲೇಜು ಸ್ನಾತಕೋತ್ತರ ಅಧ್ಯಯನದ ಆಕಾಂಕ್ಷಿಗಳಿಗೆ ತರಬೇತಿ ನೀಡಲು 40 ದಿನಗಳ ಉಚಿತ ಪಿ ಜಿ ಸಿ ಇ ಟಿ ಕೋಚಿಂಗ್ ಅನ್ನು ನಡೆಸುತ್ತದೆ.ಈ ಒಂದು ದಿನದ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು
೧.ಉದ್ಯಮಿಯಾಗಲು ಉದ್ಯಮದ ನಿರೀಕ್ಷೆಗಳು ಮತ್ತು ಮಾರ್ಗಗಳನ್ನು ಶ್ರೀ.ವಿಜೇಶ್ ಎನ್ ಸೈಗಲ್, ವ್ಯವಸ್ಥಾಪಕ ನಿರ್ದೇಶಕರು, ಎವಿಎನ್ ಗ್ರೂಪ್, ಹುಬ್ಬಳ್ಳಿ,
೨.ಶ್ರೀ.ನಾಗನಗೌಡ ಎಂ.ಪಾಟೀಲ್, ನಿರ್ದೇಶಕರು, ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ ಅವರಿಂದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ವೃತ್ತಿ ಅವಕಾಶಗಳು
೩.ಉದ್ಯೋಗಕ್ಕಾಗಿ ಸಿದ್ಧತೆಗಳು ಶ್ರೀ.ಸುಹಾಸ್ ರಜಪೂತ, ನಿರ್ದೇಶಕರು, ಪ್ರೊಫಿಸೆಂಟ್ ಮೈಂಡ್ಸ್, ಬೆಳಗಾವಿ ಅವರಿಂದ ನಡೆಸಿಕೊಡಲಾಯಿತು ಸಂಸ್ಥೆಯ ನಿರ್ದೇಶಕ ಡಾ.ವೀರಣ್ಣ ಡಿ ಕೆ ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಧಾರವಾಡದ ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಬಸವರಾಜ ತಲ್ಲೂರು, ಡಾ.ಪೂರ್ಣಿಮಾ ಚರಂತಿಮಠ, ಪ್ರಾಧ್ಯಾಪಕಿ ಎಮಿರಿಟಸ್, ಐಇಎಂಎಸ್ ಬಿ-ಸ್ಕೂಲ್ ಹುಬ್ಬಳ್ಳಿ ಕಾರ್ಯಕ್ರಮವನ್ನು ಪ್ರೊ.ವಿನಾಯಕ ಉಪರಾಟೆ ಮತ್ತು ಪ್ರೊ.ಪ್ರೀತಿ ಬೆಳಗಾವಿಕರ ಸಂಯೋಜಿಸಿದ್ದರು , ವಿವಿಧ ಕಳುಜುಗಳಿಂದ ಸುಮಾರ್ ೨೧೨ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.