ಸ್ಥಳೀಯ ಸುದ್ದಿ

ಎಸ್.ಎಮ್.ಭೂಮರಡ್ಡಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಎನ್.ಎಸ್.ಎಸ್. ಚಟುವಟಕೆಗಳ ಉದ್ಘಾಟನೆ

ಗಜೇಂದ್ರಗಡ: ತಾಲ್ಲೂಕಿನ ಸ್ಥಳೀಯ ಎಸ್ಎಂ ಭೂಮರಡ್ಡಿ ಪದವಿಪೂರ್ವ ಮಹಾವಿದ್ಯಾಲಯ ಗಜೇಂದ್ರಗಡ ಹಮ್ಮಿಕೊಂಡಿದ್ದ ಸಾಹಿತಿಕ ಸಾಂಸ್ಕೃತಿಕ ಕ್ರೀಡೆ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ

ಈ ಸಮಾರಂಭ ಉದ್ಘಾಟಕರಾಗಿ ರೋಣ ವೃತ್ತದ ಸಿಪಿಐ ಶಿವಾನಂದ್ ವಾಲಿಕಾರ್ ಮಾಡಿದ್ದರು ಹಾಗೂ ವಿದ್ಯಾರ್ಥಿಗಳು ಹೇಗೆ ಇರಬೇಕು ಎಂಬುದನ್ನು ತಿಳಿಸಿದರು ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ವಿಕಾಸದ ಜೊತೆಗೆ ಸಮಾಜದ ಸಂಪತ್ ಭರಿತ ವ್ಯಕ್ತಿಗಳಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಉದ್ಘಾಟಿಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಮ್ ಸಿ ಕಟ್ಟಿಮನಿ ಜುಲೈ 26 ಕಾರ್ಗಿಲ್ ವಿಜಯೋತ್ಸವನ್ನು ಕುರಿತು ಆ ಯುದ್ಧದಲ್ಲಿ ಹೋರಾಟ ಮಾಡಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿದರು ಹಾಗೂ ವಿದ್ಯಾರ್ಥಿಗಳು ದೇಶಾಭಿಮಾನ ಸಾಮಾಜಿಕ ಕಳಕಳಿ ಗುರು ಹಿರಿಯರನ್ನು ಗೌರವದಿಂದ ಕಾಣುವಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಎರಡು ಅಮೂಲ್ಯ ಘಟ್ಟಗಳು ಇವುಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾಕ್ಟರ್ ಎಸ್ ಎನ್ ಶಿವರಡ್ಡಿ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುವ ಸಾಂಘಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸರ್ವತೋಮುಖ ವ್ಯಕ್ತಿತ್ವ ವಿಕಾಸವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಜಿ ಬಿ ಗುಡಿಮನಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತ ಪಡಿಸಲು ಇಲಾಖೆ ಮತ್ತು ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ ವಿದ್ಯಾರ್ಥಿಗಳು ಅವುಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಳೆದ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎ ಎಸ್ ವಡ್ಡರ್, ಎಸ್ ಎಸ್ ವಾಲಿಕಾರ್, ವೈ ಆರ್ ಸಕ್ರೋಜಿ, ಎಂ ಎಲ್ ಕ್ವಾಟಿ, ಜ್ಯೋತಿ ಎಸ್ ಗದಗ್ ,ವಿ ಎಂ ಜೂಚನಿ, ಎ ಎಸ್ ಜೂಚನಿ, ಎಸ್ ಕೆ ಕಟ್ಟಿಮನಿ, ಎಸ್ ಬಿ ಕರಬಾಶೆಟ್ಟರ್ ,ಸಂಗಮೇಶ್ ಹುನಗುಂದ್, ಎಲ್ ಕೆ ಹಿರೇಮಠ್, ಕವಿತಾ ಕವಲೂರ್, ಚೈತ್ರ ಗಾಯಕ್ವಾಡ್, ಪ್ರೇಮಾ ಚುಂಚಾ, ಗೋಪಿ ರಾಯಬಾಗಿ ,ಎಂ ಎಸ್ ನಾಗರಾಳ ,ಶ್ರೀಕಾಂತ್ ಪೂಜಾರಿ, ಸುನಿಲ್ ಬಂಡಿ ವಡ್ಡರ್, ಗೀತಾಬಾಯಿ ಬದಿ, ಹಾಗೂ ಕಾಲೇಜಿನ ವಿದ್ಯಾರ್ಥಿ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *