ಎಲ್ಲಾ ಕಚೇರಿಗಿಂತ ವಿಭಿನ್ನ ಧಾರವಾಡದ ಡಿಡಿಪಿಐ ಕಚೇರಿ
ಧಾರವಾಡ
ಧಾರವಾಡದ ಡಿಡಿಪಿಐ ಕಚೇರಿ ತುಂಬಾನೆ ಡಿಫರೆಂಟ್ ಆಗಿ, ಎಲ್ಲರ ಗಮನ ಸೆಳೆಯುತ್ತಿದೆ.
ಇಲ್ಲಿ ಕಚೇರಿಗೆ ಬರೋವರಿಗೆ ಮೊದಲು ಕಾಣುವುದು ಸುಂದರವಾಗಿ ಗೋಡೆಗಳ ಮೇಲೆ ಬರೆದಿರುವ ಚಿತ್ರಗಳು.
ಧಾರವಾಡ ಡಿಡಿಪಿಐ ಕಚೇರಿ ಸರ್ಕಾರಿ ಕಚೇರಿಗಳಿಗಿಂತ ಬಿನ್ನವಾಗಿ, ಪರಿಸರ ಸ್ನೇಹಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಸಧ್ಯ ಇರುವ ಡಿಡಿಪಿಐ ಎಸ್.ಎಸ್. ಕೆಳದಿಮಠ ಅವರು ಕೂಡ ಕಚೇರಿಯನ್ನು ಇನ್ನಷ್ಟು ಪರಿಸರ ಸ್ನೇಹಿ ಆಗಿ ಮಾಡಲು ಮುಂದಾಗಿದ್ದಾರೆ.
ಡಿಸಿ ಕಪೌಂಡನಲ್ಲಿರುವ ಈ ಕಚೇರಿ ನೋಡಿದ್ರೆ ಸಾಕು, ಹೀಗೆ ಸುಂದರವಾಗಿ ಕಾಣಲು ಶ್ರಮಿಸಿದ 4 ಮಂದಿ ಶಿಕ್ಷಕರು ಇದ್ದಾರೆ. ಅದರಲ್ಲಿ ಒಬ್ಬರು ಸಂಜೀವ ಕಾಳೆ ಎನ್ನುವ ಶಿಕ್ಷಕರು ಕೊವಿಡ್ ಸಮಯದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಇವರನ್ನು ನಿತ್ಯವೂ ಇಲ್ಲಿ ನೆನೆಯುತ್ತಾರೆ ಡಿಡಿಪಿಐ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳು.
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ನೋಡಿದ್ರೆ, ಡಿಡಿಪಿಐ ಕಚೇರಿ ಮಾತ್ರ ಕೆಲಸಕ್ಕೆ ಹೋಗುವರಿಗೆ ಹಾಗೂ ಇತರೆ ಕೆಲಸ ನಿಮಿತ್ತ ಕಚೇರಿಗೆ ಹೋಗುವವರಿಗೆ ಖುಷಿ ಕೊಡುವುದು ಮಾತ್ರ ಅಷ್ಟೇ ಸತ್ಯ.