ಎದೆ ಮೇಲಿರು ಟೊಪಿ ನಿಮಗೆ ! ಕಾಲಲ್ಲಿರುವ ಚಪ್ಪಲಿ ನಮಗೆ ಸಿದ್ರಾಮಯ್ಯ ನವರೆ ಇದು ಸರಿಯಲ್ಲ: ಸಿ ಎಮ್ ಇಬ್ರಾಹಿಂ!
ಹುಬ್ಬಳ್ಳಿ
ಪರಿಷತ್ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಮ ಇಂದು ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡರು.
ಕಳೆದ ಎರಡು ದಿನಗಳಿಂದ ಹುಬ್ಬಳ್ಳಿಯಲ್ಲಿ ವಾಸ್ಥವ್ಯ ಹೂಡಿರುವ ಅವರು ಪವರ್ ಸಿಟಿ ನ್ಯೂಸ್ ಕನ್ನಡ ದೊಂದಿಗೆ ಮಾತನಾಡಿ ತಮ್ಮ ಪಕ್ಷದಲ್ಲಿನ ಕೆಲವೊಂದು ನ್ಯೂನ್ಯತೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಹೌದು ಕಳೆದ ನಾಲ್ಕೈದು ದಿನಗಳಿಂದಲೂ ರಾಜ್ಯ ರಾಜಕಾರಣದಲ್ಲಿ ಸ್ವಪಕ್ಷ ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರ ಮೇಲೆ ನೈತಿಕ ದೌರ್ಜನ್ಯ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ತಮ್ಮ ತಮ್ಮ ಸ್ಥಾಳಗಳನ್ನ ಬೇರೆ ಬೇರೆ ಕೈ ನಾಯಕರಿಗೂ ನೀಡಲಿ ನೋಡೋನಾ ಎಂದು ಸವಾಲೆಸದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಾಗಿನಿಂದಲೂ ಗಮನಿಸುವುದಾದರೆ ಇಲ್ಲಿ ಕೇವಲ ಸ್ವಾರ್ಥ ರಾಜಕಾರಣವೆ ಬಲಾಢ್ಯ ವಾಗಿ ಬೆಳೆಯುತ್ತಿದೆ. ಹೀಗಿರುವಾಗ ಪರಿಷತ್ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಾಗಿದ್ದ ನನ್ನನ್ನ ಕಡೆ ಗಣಿಸಲಾಗಿದೆ.
ಕಾಂಗ್ರೆಸ್ ಈಗ ಒಡೆದ ಕನ್ನಡಿಯಂತಾಗಿದೆ ಅದು ಮತ್ತೆ ಒಂದಾಗಲು ಸಾಧ್ಯವಿಲ್ಲ ಎಂದರು. ಸಿದ್ರಾಮಯ್ಯಗೂ ಇಲ್ಲಿ ಬೆಲೆಯಿಲ್ಲದಂತಾಗಿದೆ ಎಂದರು.
ಆದರೆ ನಾನಿಗ ಕಾಂಗ್ರೆಸ್ ನಿಂದ ಹೊರಬರಬೇಕಿದೆ. ಎಕೆಂದ್ರೆ ನಾನು ಹೊರ ಬರುತ್ತಿದ್ದಂತೆಯೆ ಯುಟಿ ಖಾದರ್ ಗೂ ಮಣಿ ಹಾಕಿರುವ ಲೀಡರ್ ಗಳು ಸ್ಥಾನ ಮಾನ ನಿಡೋದಕ್ಕೆ ಹಂಬಲಿಸುತ್ತಿದ್ದಾರೆ.
ಆದರೆ ನನ್ನ ಮೇಲೆ ಈಗ ಇವರಿಗೆ ಪ್ರೀತಿ ಉಕ್ಕಿ ಬರ್ತಿದೆ ಯಾವ್ದು ಬೇಡಾ ಈಗಾಗಲೆ ನನ್ನನ್ನ ಮಮ್ತಾ ಬ್ಯಾನರ್ಜಿ ಕೀಶೂರ್ ಪ್ರಶಾಂತ್ ಹಾಗೂ ಅಖಿಲೇಶ್ ಯಾದವ್ ಸಹ ನನ್ನನ್ನ ಸಂಪರ್ಕಿಸಿದ್ದಾರೆ. ಇದರ ಬಗ್ಗೆ ಚರ್ಚೆ ನಡಿತಿದೆ ಎಂದರು.
ಹಾಗಂತ ಹೊಸ ಪಕ್ಷ ಕಟ್ಟೋದಾಗಲಿ ಮತ್ತೋಂದಾಗಲಿ ಮಾಡೋದಕ್ಕೆ ನಾನು ಸಮರ್ಥನಲ್ಲ ಎಂದರು.
ಸಧ್ಯಕ್ಕೆ
ಜೋಳಿಗೆ ಹಿಡಿದು ಅಲಿಂಗ(ಅಲ್ಪ ಸಂಖ್ಯಾತರ ಮತ್ತು ಲಿಂಗಾಯತರು)
ವನ್ನ ಒಗ್ಗಟ್ಟು ಗೊಳಿಸಿಬೇಕಿದೆ. ನಾನು ಕೂಡ ಜೋಳಿಗೆ ಹಾಕಿ ಹೊರಟಿರುವೆ ನನ್ನೊಂದಿಗೆ ಯಾರು ಬರ್ತಾರೊ ಬರಲಿ ಎಂದು ಹೇಳುತ್ತ ನರಗುಂದಕ್ಕೆ ಪ್ರಯಾಣ ಬೆಳೆಸಿದರು.