ಸ್ಥಳೀಯ ಸುದ್ದಿ
ಎಂಬಿಬಿಎಸ್ ವಿದ್ಯಾರ್ಥಿನಿಗೆ ಕೇಂದ್ರ ಸಚಿವರಿಂದ ಪ್ರೀತಿಯ ಸನ್ಮಾನ
ಧಾರವಾಡ
ಧಾರವಾಡ- ಹುಬ್ಬಳ್ಳಿ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಅವರ ಮನೆಗೆ ಇಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಭೇಟಿ ನೀಡಿದ್ರು.
ಧಾರವಾಡದ ಪ್ರತಿಷ್ಠಿತ ಶ್ರೀ ಮಂಜುನಾಥೇಶ್ವರ ಮೆಡಿಕಲ್ ಕಾಲೇಜನಲ್ಲಿ MBBS ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆಯಾದ ಕು ವೈಷ್ಣವಿ ಈರೇಶ ಅಂಚಟಗೇರಿ ಅವರಿಗೆ ಸಚಿವರು ಸನ್ಮಾನಿಸಿ ಗೌರವಿಸಿದ್ರು.
ಧಾರವಾಡದ ಪ್ರವಾಸ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನಮ್ಮ ಮನೆಗೆ ಭೇಟಿ ನೀಡಿದ ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಶ್ರೀ ಪ್ರಲ್ಹಾದ ಜೋಶಿಯವರು ಮಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಆಶೀರ್ವಾದ ಮಾಡಿದ್ದು ನಮಗೆಲ್ಲಾ ಸಂತೋಷದ ವಿಷಯವೆಂದು ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಅವರು ಹೇಳಿದ್ರು..