ಸ್ಥಳೀಯ ಸುದ್ದಿ
ಎಂಜಿನೀಯರ್ ಶವ ಇಟ್ಟು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ
ಧಾರವಾಡ
ಧಾರವಾಡದ ಮಹಾನಗರ ಪಾಲಿಕೆ ಕಚೇರಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್ ಅರುಣ್ ಹಿಂಡಿಗೇರಿ ಇಂದು ಬೆಳಗ್ಗೆ
ಕೆಲಸದ ಒತ್ತಡದಿಂದ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಕೂಡಲೇ ಮೃತನ ಸಂಬಂಧಿಕರಿಗೆ ಸೂಕ್ತ ಪರಿಹಾರ ಕೊಡುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಕೊನೆಗೆ ಪ್ರತಿಭಟನೆ ಸ್ಥಳಕ್ಕೆ ಮೇಯರ್ ಈರೇಶ ಅಂಚಟಗೇರಿ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ರು. ಜೋತೆಗೆ ಮೃತನ ಕುಟುಂಬಸ್ಥರ ಜೋತೆಗೆ ಪಾಲಿಕೆ ಇರುತ್ತೆ ಸಂಬಂಧಿಸಿದ ಅಧಿಕಾರಿಗಳ ಜೋತೆಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡುವೆ ಎಂದು ಭರವಸೆ ನೀಡಿದ್ರು.