
POWER CITYNEWS: HUBBALLI
ಹುಬ್ಬಳ್ಳಿ : ಬಿಸಿಲಿನ ಬೆಗೆಗೆ ಬಸವಳಿದಿದ್ದ ಅವಳಿನಗರದ ಜನತೆಗೆ ಇಂದು ದಿಢೀರ್ ಮಳೆ ಸುರಿದಿದ್ದು ಹಲವೆಡೆ ತಂಪೆರೆದಿದೆ. ಇದರಿಂದ ಕಾದ ಹಂಚಿನಂತಾಗಿದ್ದ ಅವಳಿನಗರದ ಸಂಚಾರಿ ರಸ್ತೆಗಳು ಮಳೆ ಹನಿಯಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ.
ಇಂದು ನಗರದ ಯಾಲಕ್ಕಿ ಶೆಟ್ಟರ್ ಕಾಲೊನಿ,ನವಲೂರು,ಸತ್ತೂರು,ರಾಯಾಪುರ,ನವನಗರ ,ತಡಸಿನಕೊಪ್ಪ ಇಟಿಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಈಗಾಗಲೇ ಧಾರವಾಢ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯೆತೆಗಳು ಹೆಚ್ಚಾಗಿದ್ದು. ಜಿಲ್ಲಾಡಳಿತವು ಕೂಡ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ಆಯಾಮ ಗಳಿಂದಲೂ ಸಿದ್ದತೆ ಕೈಗೊಂಡಿದ್ದು. ಇದೀಗ ಪ್ರತಿವರ್ಷದಂತೆ ಇ ವರ್ಷವೂ ಕಾಮ ದಹನ ಹಬ್ಬದಾಚರಣೆ ಎಡಬಲ ದಿನಗಳಲ್ಲಿ ಆಗಬಹುದಾದ ಮಳೆ ಇದಾಗಿರಬಹುದೆನ್ನುವುದು ಪ್ರಜ್ಙಾವಂತರ ಅನಿಸಿಕೆಯಾಗಿದೆ.
ಇನ್ನೂ ಇಂದಿನಿಂದ ಮೂರು ದಿನ ಕಾಲ ರಾಜ್ಯದ ಕೆಲವೆಡೆ ಅಂದ್ರೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 4 ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಬೆಳಗಾವಿ, ಬೀದರ್, ಬಾಗಲಕೋಟೆ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾದ ಕಾರಣ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎನ್ನಲಾಗಿದೆ.
ಎಮ್ ಆರ್ ದಖನಿ (ರಾಜಾ)
