ಸ್ಥಳೀಯ ಸುದ್ದಿ

ಉತ್ತರ ಕರ್ನಾಟಕದಲ್ಲಿ ಛೋಟಾ ಬಾಂಬೆ ಸಿನಿಮಾ ಹವಾ

ಧಾರವಾಡ

ಉತ್ತರ ಕರ್ನಾಟಕದ ಅತಿ ದೊಡ್ಡ ಮಹಾನಗರ ಹುಬ್ಬಳ್ಳಿ. ಈ ಹುಬ್ಬಳ್ಳಿಗೆ ಛೋಟಾ ಮುಂಬೈ ಅಂತಾಲೂ ಕರೆಯುತ್ತಾರೆ. ಇಂತಹ ಊರಿನ ರೌಡಿಸಂ ಬಗ್ಗೆ ಸಿನಿಮಾ ಒಂದು ರೆಡಿಯಾಗಿದ್ದು, ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ಇಂತಹ ಸಂತೋಷದ ವಿಷಯವನ್ನು ಚಿತ್ರತಂಡದವರು ಇಂದು‌ ಧಾರವಾಡದಲ್ಲಿ
ಸುದ್ದಿಗೋಷ್ಠಿ ಮಾಡಿ ತಿಳಿಸಿದ್ರು.

ಯೂಸೂಫ ಖಾನ್ ರಚನೆ ಹಾಗೂ ನಿರ್ದೇಶನದ ಈ ಸಿನಿಮಾ ಸಾಕಷ್ಟು ರೀತಿಯಲ್ಲಿ ಸದ್ದು ಮಾಡುತ್ತಿದೆ.

ಬಹುತೇಕ ಧಾರವಾಡ- ಹುಬ್ಬಳ್ಳಿ ಕಲಾವಿದರು ಇದರಲ್ಲಿ ಇದ್ದು, ಬಾಲಿವುಡ್ ಸಿನಿಮಾದಲ್ಲಿ ಕೆಲಸ ಮಾಡಿರುವ ಅನೀಸ್ ಬಾರುದವಾಲೆ ಅವರ ಸಹಕಾರವೂ ಚಿತ್ರಕ್ಕೆ ಇದೆ.

ಚಿತ್ರದಲ್ಲಿ ನಾಯಕ ನಟನಾಗಿ ಸೂರಜ ಸಾಸನೂರ ಇದ್ದರೆ, ಖಡಕ್ ಪೊಲೀಸ್ ಅಧಿಕಾರಿಯಾಗಿ ಸೂರ್ಯಾನ ರೋಲ್ ಮಾಡಿರುವ (ಸಿಪಿಐ ಆಗಿ ಸಲೀಂ ಮುಲ್ಲಾನವರ ಪಾತ್ರ ಮಾಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಹುಬ್ಬಳ್ಳಿ ‌ಹೆಸರು ಛೋಟಾ ಮುಂಬೈ ಅಂತಾ ಆಗಲು ಕಾರಣಗಳೇನು ಎನ್ನುವುದಕ್ಕೆ ಬಹುತೇಕ ಸಿನಿಮಾದಲ್ಲಿ ಉತ್ತರವಿದೆ.

ರೌಡಿಸಂನಿಂದ ಏನನ್ನು ಸಾಧಿಸಲು‌ ಸಾಧ್ಯವಿಲ್ಲಾ. ಬದಲಾಗಿ ಎಲ್ಲವೂ ಹಾಳಾಗಿ ಹೋಗುತ್ತೆ ಎನ್ನುವ ಮೇಸೆಜ್ ಈ ಸಿನಿಮಾದಲ್ಲಿದೆ.

ಇನ್ನು ಹೆಚ್ಚಾಗಿ ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಸಿನಿಮಾವನ್ನು
ನೋಡಿದ್ರೆ ಗೊತ್ತಾಗಲಿದೆ ಛೋಟಾ ಬಾಂಬೆ ಸಿನಿಮಾದ ಅಸಲಿ ಖದರ್ ಹೇಗಿದೆ ಎನ್ನೆಂದು..

Related Articles

Leave a Reply

Your email address will not be published. Required fields are marked *