ಈದ್ಗಾದಲ್ಲಿ ಗಣೇಶ ಪ್ರತಿಷ್ಠಾನಕ್ಕೆ ಅವಕಾಶ ಕಲ್ಪಿಸಿದರೆ ಉಗ್ರ ಹೋರಾಟ : ಉಳ್ಳಿಕಾಶಿ ಎಚ್ಚರಿಕೆ!
POWERCITY NEWS:
ಹುಬ್ಬಳ್ಳಿ :ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ಹುಬ್ಬಳ್ಳಿಯಲ್ಲಿ ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಹೇಳಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏಕ ಪಕ್ಷಿಯ ವಾಗಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿತ್ತು.
ಇಂತಹ ಸಂಘರ್ಷದ ಸಾರ್ವಜನಿಕ ನೆಮ್ಮದಿಗೆ ಆತಂಕ ತರುವ ವಾತಾವರಣಕ್ಕೆ ಈಗಿನ ಸರ್ಕಾರ ಅವಕಾಶ ಕಲ್ಪಿಸಬಾರದು.
ಕಾಂಗ್ರೆಸ್ ಸರ್ಕಾರ ಕೂಡ ಪಟ್ಟಭದ್ರ ಹಿತಾಸಕ್ತಿ ಒತ್ತಡಕ್ಕೆ ಮನಿಯಬಾರದು.
ಯಾವುದೇ ಧರ್ಮದವರು ಇನ್ನೊಂದು ಧರ್ಮಕ್ಕೆ ಅಪಮಾನ ಮಾಡುವ ನಿಟ್ಟಿನಲ್ಲಿ ಧರ್ಮಕ್ಕೆ ವಿರೋಧದ ಮಧ್ಯೆ ವಿವಾದಿತವಾಗಿ ಆಚರಣೆಗಳಿಗೆ ಸರ್ಕಾರ ಅವಕಾಶ ನೀಡಬಾರದು.
ಒಂದು ವೇಳೆ ಗಣೇಶ ಪ್ರತಿಷ್ಠಾಪನೆಗೆ ಈದ್ಗಾ ಮೈದಾನದಲ್ಲಿ ಅವಕಾಶ ನೀಡದರೆ ಆಗಬಹುದಾದ ಅಹಿತಕರ ಘಟನೆಗಳಿಗೆ ಅಧಿಕೃತವಾಗಿ ಆಹ್ವಾನ ನೀಡಿದಂತಾಗುತ್ತದೆ. ಹೀಗಿರುವಾಗ ಸ್ಥಳೀಯ ಪಾಲಿಕೆ, ಸಂಸ್ಥೆ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಇ ಬಗ್ಗೆ ಗಮನಕ್ಕಿರಲಿ.
ಕೆಲವು ಸಂಘಟನೆಗಳು ಸ್ವಯಂ ಹಿತಾಸಕ್ತಿ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿವೆ.
ಅಂತಹ ಸಂಘಟನೆಗಳಿಗೆ ನಾವು ತಿಳಿಸುವುದಿಷ್ಟೆ
ಸಂಘರ್ಷ ಮಾಡುವಂತಹ ಆಚರಣೆಗಳಿಗೆ ತಾವು ಮುಂದಾಗಬಾರದೆಂದು ವಿನಂತಿಸುತ್ತೇವೆ.
ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನೂ ಅನೇಕ ಕಡೆ ಗಣೇಶ ಪ್ರತಿಷ್ಠಾಪನೆಗೆ ಸ್ಥಳ ಇವೆ.ಅಂತಹ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ, ಅದರ ಖರ್ಚು ವೆಚ್ಚವನ್ನ ನಾವೇ ನೀಡುತ್ತೆವೆ.ಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈದ್ಗಾ ಮೈದಾನದ ಮೇಲೆ ರಾಜಕಾರಣ ಮಾಡಬೇಡಿ.
ಸಾರ್ವಜನಿಕರು, ನೈಜ ಹಿಂದುಗಳು ಇಂತಹ ವಿಚಾರಕ್ಕೆ ಬೆಂಬಲ ನೀಡಬಾರದು.
ಸರ್ಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.