ಇಟಗಿ ಗ್ರಾಮ ಪಂಚಾಯತಿಗೆ ಇಒ ಭೇಟಿ
ಗಜೇಂದ್ರಗಡ: ತಾಲೂಕಿನ ಇಟಗಿ ಗ್ರಾಮ ಪಂಚಾಯತಿಗೆ ಇಂದು ಬೆಳಗ್ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ, ಪಂಚಾಯತಿಯ ಪೈಲ್ ಗಳನ್ನು ಪರಿಶೀಲನೆ ಮಾಡಿದರು.
ನಂತರ ಬೂದು ನೀರು ನಿರ್ವಹಣೆ ಕಾಮಗಾರಿ ಕೈಗೊಳಬಹುದಾದ ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಶೀಘ್ರವೇ ಅಂದಾಜು ಪತ್ರಿಕೆ ತಯಾರಿಸಿ ಕಾಮಗಾರಿ ಪ್ರಾರಂಭವಿಸುವಂತೆ ಪಿಡಿಒ, ಟಿಎಇಗೆ ಸೂಚಿಸಿದರು.
ಇಟಗಿ ಕೆರೆ ವೀಕ್ಷಣೆ ಮಾಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಚರಂಡಿ, ಶೌಚಾಲಯ, ಆಟದ ಮೈದಾನ ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು.
ಡಿಜಿಟಲ್ ಗ್ರಂಥಾಲಯ ವೀಕ್ಷಣೆ ಮಾಡಿದರು. ಸರಕಾರಿ ಪ್ರೌಢಶಾಲೆಗೆ ಭೇಟಿ ಬಾಸ್ಕೆಟ್‌ಬಾಲ್, ಪಿಂಕ್ ಶೌಚಾಲಯ ವೀಕ್ಷಣೆ ಮಾಡಿ ಆಗಸ್ಟ್ 15 ಪಿಂಕ್ ಶೌಚಾಲಯ ಉದ್ಘಾಟನೆ ಮಾಡಿ ಪ್ರಾರಂಭಿಸುವಂತೆ ಸೂಚಿಸಿದರು. ನರೇಗಾ ಯೋಜನೆಯಡಿ ಶಾಲೆಗೆ ರನ್ನಿಂಗ್ ಟ್ರ್ಯಾಕ್ ಮಾಡುವಂತೆ ಆದರ್ಶ ಶಾಲೆ ಭೇಟಿ ನೀಡಿ ಅಡುಗೆ ನೀರನ್ನು ಕಾಂಪೌಂಡ್ ನಲ್ಲಿಯೇ ಸಂಗ್ರಹವಾಗುತ್ತಿದ್ದು, ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಶಿಕ್ಷಕರು ಮನವಿ ಮಾಡಿದರು. ಸಮಸ್ಯೆ ಪರಿಹರಿಸುವಂತೆ ಪಿಡಿಒ ಅವರಿಗೆ ತಿಳಿಸಿದರು. ಘನ ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಣೆ ಮಾಡಿದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಟಿಐಇಸಿ,ಟಿಸಿ, ಟಿಎಇ, ಪಂಚಾಯತ್ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಇದ್ದರು.