ಆಯ್ಕೆಯಾದ ವಾರ್ಡ ಅಭಿವೃದ್ಧಿ ಮರೆತ ಪಾಲಿಕೆ ಸದಸ್ಯೆ
ಧಾರವಾಡ
ಇವರು ಜನಪ್ರತಿನಿಧಿ ಆದ್ರೆ ತಾವು ಆಯ್ಕೆಯಾದ ವಾರ್ಡನ ಅಭಿವೃದ್ದಿಯನ್ನೆ ಮರೆತಂತೆ ಕಾಣುತ್ತಿದೆ.
ಇವರ ವಾರ್ಡಿನಲ್ಲಿ ನಿತ್ಯವೂ ಜನರು ಮಳೆಗಾಲದಲ್ಲಿ
ಬಿದ್ದು ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇದು ಧಾರವಾಡ ನಗರದ ನಿವಾಸಿಗಳ ದುಸ್ಥಿತಿಯಾಗಿದೆ. ಏಕೆಂದ್ರೆ ಇಲ್ಲಿ ಮಳೆಗಾಲ ಬಂದ್ರೆ ಸಾಕು ಜನರು ಜಾರಿ ಬಿದ್ದು ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಈ ಸಮಸ್ಯೆ ಇರುವುದು ಧಾರವಾಡದ ಎತ್ತಿನಗುಡ್ಡ ರಸ್ತೆ ಹಾಶ್ಮೀನಗರದಲ್ಲಿ ಇಲ್ಲಿ ಮಳೆಗಾಲದಲ್ಲಿ ಪರಿಸ್ಥಿತಿ ಅಂತೂ ತೀರಾ ಹದಗೆಟ್ಟು ಹೋಗಿದೆ.
ರಸ್ತೆಗಳಿಗೆ ಮೆಟಲಿಂಗ್ ಮಾಡಿ ಸುಮ್ಮನಾಗಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸುವ ಕೆಲಸ ಮಾಡುತ್ತಿಲ್ಲಾ.
ಇನ್ನು ಪಾಲಿಕೆಯ 2 ನೇ ವಾರ್ಡಗೆ ಬರುವ ಈ ಹಾಶ್ಮೀನಗರದ ಪ್ರದೇಶಗಳು ಸ್ಥಿತಿಯನ್ನು ನೋಡಿ ಇಲ್ಲಿಂದ ಆಯ್ಕೆಯಾಗಿರುವ ಪಾಲಿಕೆಯ ಸದಸ್ಯೆಯೂ ಆಗಿರುವ ಶ್ರೀಮತಿ ಸೂರವ್ವಾ ಪಾಟೀಲರಿಗೆ ಕೂಡ ಕಾಳಜಿ ಇಲ್ಲದಂತೆ ಕಾಣುತ್ತಿದೆ.
ಆಯ್ಕೆಯಾದ ಬಳಿಕ ಯಾವತ್ತಿಗೂ ವಾರ್ಡಗೆ ಬಂದು ಹೋಗದ ಇವರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ವಾರ್ಡನ ಅಭಿವೃದ್ಧಿಯನ್ನೆ ಇವರು ಮರೆತು ಹೋಗಿದ್ದಾರೆ ಅಂತೀದಾರೆ ಜನರು.
ಧಾರವಾಡ -ಹುಬ್ಬಳ್ಳಿ ಸ್ಮಾರ್ಟ ಸಿಟಿ ಗಳಲ್ಲಿ ಒಂದಾಗಿದೆ. ಆದ್ರೆ ಇಲ್ಲಿನ ಪರಿಸ್ಥಿತಿ ಮಾತ್ರ ತೀರಾ ಅಯೋಮಯವಾಗಿದೆ.
ಈ ಸಮಸ್ಯೆಗಳಿಗೆ ಮೇಯರ್ ಈರೇಶ ಅಂಚಟಗೇರಿ ಅವರು ಯಾವ ರೀತಿಯ ಪರಿಹಾರ ಕೊಡ್ತಾರೆ ನೋಡಬೇಕಿದೆ.