ಅಲ್ಪಸಂಖ್ಯಾತರ ಅಭಿವೃದ್ಧಿ ಮರೆತ ಶಾಸಕ
ಧಾರವಾಡ
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಕ್ಷೇತ್ರದಲ್ಲಿ ಇರುವ ಅಲ್ಪಸಂಖ್ಯಾತರ ಅಭಿವೃದ್ದಿಯನ್ನು ಮರೆತಂತೆ ಕಾಣುತ್ತಿದೆ.
ಇದಕ್ಕೆ ತಾಜಾ ಉದಹಾರಣೆ ಪವರ್ ಸಿಟಿನ್ಯೂಸ್ ಕನ್ನಡದಲ್ಲಿ ತೊರಿಸ್ತೇವಿ ನೋಡಿ.
ಶಾಸಕರು ಅಭಿವೃದ್ಧಿ ಮಾಡ್ತಾರೆ ಕ್ಷೇತ್ರ ಅಭಿವೃದ್ಧಿ ಆಗುತ್ತೆ ಎಂದು ನಂಬಿರುವ ಅಲ್ಪಸಂಖ್ಯಾತ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಗ್ರಾಮೀಣ ಶಾಸಕರು.
ಗ್ರಾಮೀಣ ಶಾಸಕರ ವ್ಯಾಪ್ತಿಯಲ್ಲಿ ಒಟ್ಟು 9 ಮಹಾನಗರ ಪಾಲಿಕೆ ವಾರ್ಡಗಳು ಬರುತ್ತಿದ್ದು, ಅದರಲ್ಲಿ ಬಹುತೇಕ ಕಡೆ ಗ್ರಾಮೀಣ ಶಾಸಕರ ಅನುದಾನ ಇರುತ್ತೆ.
ಹೀಗೆ ಶಾಸಕರ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂಬರ್ 2 ರ ಎತ್ತಿನಗುಡ್ಡ ರಸ್ತೆಯ ಸಮಸ್ಯೆಇದು.
ಇಲ್ಲೊಂದು ಹಾಶ್ಮೀನಗರ ಮೊದಲ ಕ್ರಾಸ ಇದೆ. ಇಲ್ಲಿ ಬಹುತೇಕ ಮಂದಿ ಅಲ್ಪಸಂಖ್ಯಾತರು ವಾಸಿಸುತ್ತಾರೆ. ಮಳೆಗಾಲ ಬಂದ್ರೆ ಇಲ್ಲಿ ಜನರು ನರಕಯಾತನೆ ಅನುಭವಿಸುತ್ತಾರೆ.
ಮಾರ್ಚ 21 – 2021 ಕ್ಕೆ ಶಾಸಕರಿಗೆ ಮನವಿ ಮಾಡಿದ್ದ ಜನರಿಗೆ ಮುಂದಿನ ಮಳೆಗಾಲ ಬರುವುದರೊಳಗಾಗಿ ನೀವು ಒಳ್ಳೆಯ ರಸ್ತೆ ಮೇಲೆ ತಿರುಗಾಡುತ್ತೀರಿ ಅಂತಾ ಹೇಳಿ ಸುಮ್ಮನಾಗಿದ್ದು ನೋಡಿದ್ರೆ, ಇದೇನಾ ಅಭಿವೃದ್ಧಿ ಎನ್ನುತ್ತಿದ್ದಾರೆ ಜನರು.
ಶಾಸಕರು ಇದೇ ರೀತಿ ತಮ್ಮ ಅನುದಾನದಲ್ಲಿ 9 ವಾರ್ಡಗಳ ಪೈಕಿ ಬಹಳಷ್ಟು ಕಡೆ ಅಲ್ಪಸಂಖ್ಯಾತರು ಇರುವ ಕಡೆ ಬಿಟ್ಟು ಅಭಿವೃದ್ಧಿ ಮಾಡಿ ತೋರಿಸಿದ್ದಾರೆ.
ಶಾಸಕರು ತೋರಿರುವ ನಿರ್ಲಕ್ಷ್ಯದ ದಾಖಲೆಯನ್ನು ನೀವು ಒಮ್ಮೆ ನೋಡಿ ಗೊತ್ತಾಗುತ್ತೆ…..
ಶಾಸಕರು ಅನುದಾನವೇ ಬಂದಿಲ್ಲಾ ಅನ್ನೋದು ಆದ್ರೆ ಉಳಿದ ಕಡೆಗಳಲ್ಲಿ ಅಭಿವೃದ್ದಿ ಶಂಕು ಸ್ಥಾಪನೆ ಹೇಗೆ ಎನ್ನುವುದಕ್ಕೂ ಉತ್ತರ ಕೊಡಬೇಕಿದೆ.
ಪ್ರಧಾನಿ ಮೋದಿ ಅವರ 8 ವರ್ಷದ ಸಾಧನೆಯನ್ನು ನೋಡಿದ್ರೆ ಸಬಕಾ ಸಾಥ್ ಸಬಕಾ ವಿಕಾಸ್ ಎನ್ನುವ ಪರಿಕಲ್ಪನೆ ಪ್ರಧಾನಿಗೆ ಇದೆ.
ಆದ್ರೆ ಗ್ರಾಮೀಣ ಶಾಸಕರು ಅಲ್ಪಸಂಖ್ಯಾತರ ವಿರೋಧಿ ಅಂತಾ ಹಣೆಪಟ್ಟಿ ಕಟ್ಟಿಕೊಂಡು ಚುನಾವಣೆ ಎದುರಿಸುತ್ತಾರಾ? ಅಥವಾ ಅಲ್ಪಸಂಖ್ಯಾತರ ಅಭಿವೃದ್ಧಿಯ ಚಿಂತಕ ಎಂದು ಜನರ ಮುಂದೆ ಮತ್ತೊಮ್ಮೆ ಹೋಗುತ್ತಾರಾ? ಎನ್ನುವುದನ್ನು ಶಾಸಕರೇ ಉತ್ತರಿಸಬೇಕಿದೆ….
ಪವರ್ ಸಿಟಿನ್ಯೂಸ್ ಸತ್ಯ ಸದಾಕಾಲ