ಅರಣ್ಯ ಇಲಾಖೆಯ ಸಾಮೂಹಿಕ ಪರೇಡ್ ಸರಿನಾ?
ಬೆಂಗಳೂರು
ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಕೇಸಗಳು ದಿನದಿಂದ ದಿನಕ್ಕೆ ನೂರರ ಗಡಿ ದಾಟಿ ಇನ್ನೂರರ ಸಮೀಪ ಹೋಗುತ್ತಿವೆ.
ಆದ್ರೆ ಇಂತಹ ಸಮಯದಲ್ಲಿ ಅರಣ್ಯ ಇಲಾಕೆ ಸಾಮೂಹಿಕವಾಗಿ ಕೊರೊನಾ ಲೆಕ್ಕಕ್ಕೆ ಇಲ್ಲಾ ಎಂಬಂತೆ ಸಾಮೂಹಿಕವಾಗಿ ಪರೇಡ್ ನಡೆಸುತ್ತಿದೆ.
ಹೌದು ಧಾರವಾಡದ ಅರಣ್ಯ ಇಲಾಕೆ ಇಂತಹದೊಂದು ಯಡವಟ್ ಮಾಡಲು ಹೋಗಿ ಆದೇಶ ಮಾಡಿದೆ.
ವಿಕೆಂಡ್ ಲಾಕಡೌನ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ರೂ ಕೂಡ, ಇದಕ್ಕೆ ಕ್ಯಾರೆ ಎನ್ನದ, ಧಾರವಾಡದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನಮಗೇನೂ ಗೊತ್ತಿಲ್ಲ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ.
ವಿಕೇಂಡ್ ಲಾಕಡೌನ ನಡುವೆಯೂ ಪ್ರತಿ ತಿಂಗಳು
1 ನೇ ಶನಿವಾರ ಹಾಗೂ 3 ನೇ ಶನಿವಾರ ಕಡ್ಡಾಯವಾಗಿ ಪರೇಡಗೆ ಹಾಜರಾಗಬೇಕೆಂದು ಆದೇಶ ಮಾಡಿದ್ದಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು.
ಲಾಕಡೌನ ಟೈಂನಲ್ಲಿ ಬಂದೋಬಸ್ತಗೆ ಪೊಲೀಸ ಇಲಾಖೆಯೊಂದಿಗೆ ಕೈಜೋಡಿಸಿದ ಅರಣ್ಯ ಇಲಾಖೆ ಈ ಬಾರಿ ಮಾತ್ರ ತಮಗೆ ತಿಳಿದಂತೆ ಲಾಕಡೌನ ಸಮಯದಲ್ಲೂ ಪರೇಡ್ ಮಾಡಿಸುತ್ತಿದ್ದಾರೆ. ಪೊಲೀಸರಿಗೆ ಬಂದೋಬಸ್ತ ಮಾಡಲು ಮ್ಯಾನ್ ಪವರ್ ಸಾಲೋದಿಲ್ಲಾ ಅಂತಾ ಇದ್ದರೂ ಇವರ ಪರೇಡ್ ಮಾತ್ರ ವಿಕೇಂಡ್ ಲಾಕಡೌನ ಇದ್ದಾಗಲೂ ನಡೆಯುತ್ತೆ.
ಈಗಾಗಲೇ ವಿಕೆಂಡ್ ಲಾಕಡೌನಲ್ಲಿ ಕೆಲವೊಂದು ವಿನಾಯಿತಿ ಇರುವುದನ್ನು ಬಿಟ್ಟು, ಶನಿವಾರ ಹಾಗೂ ರವಿವಾರ ಎಲ್ಲವೂ ಬಂದ್ ಇರಲಿದೆ ಎನ್ನುವ ಆದೇಶವೂ ಸರ್ಕಾರ ಮಾಡಿದೆ.
ರಾಜ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ಇರಲಾರದ ಆದೇಶ ಇಲ್ಲೇಕೆ ಎನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ.
ಇದಕ್ಕೆ ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಅವರೇ ಉತ್ತರಿಸಬೇಕಿದೆ.