ಸ್ಥಳೀಯ ಸುದ್ದಿ
ಅಮೃತ ನಡಿಗೆ ಕಾರ್ಯಕ್ರಮ
ಧಾರವಾಡ
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಅಮೃತ ನಡಿಗೆ ಕಾರ್ಯಕ್ರಮವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ನೇತೃತ್ವದಲ್ಲಿ, ನಡೆಯಿತು.
ಧಾರವಾಡದ 71 ಘಟಕದ ಶಾಸಕರಾದ ಅಮೃತ ದೇಸಾಯಿಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಜೆ.ಎಸ್.ಎಸ್ ಶಾಲಾ ಆವರಣದಿಂದ, ಟೋಲ್ ನಾಕಾ, ಕೋರ್ಟ್ ಸರ್ಕಲ್, ಜುಬಿಲಿ ಸರ್ಕಲ್ ಮಾರ್ಗವಾಗಿ ದೇಶಾಭಿಮಾನದ ಘೋಷಣೆ ಮಾಡುತ್ತ ನಡಿಗೆಯ ಮೂಲಕ ಕಡಪಾ ಮೈದಾನವನ್ನು ತಲುಪಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸಭಾನಾಯಕರಾದ ತಿಪ್ಪಣ್ಣ ಮಜ್ಜಿಗಿ, ಮಹಾನಗರ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ, ಪಾಲಿಕೆಯ ಸದಸ್ಯರಾದ ಸುರೇಶ ಬೆದರೆ ರವರು, ಶಂಭು ಸಾಲಿಮನಿ ಲಕ್ಷ್ಮಿ ಹಿಂಡಸಗೇರಿ, ನೀಲಮ್ಮ ಅರವಳದ, ಬಿಲಕಿಸಬಾನು ಮುಲ್ಲಾ, ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ , ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಆರ್.ಎಂ. ಕುಲಕರ್ಣಿ, ಪಾಲಿಕೆಯ ಅಧಿಕಾರಿಗಳು,ಶಾಲಾ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು