ಸ್ಥಳೀಯ ಸುದ್ದಿ
ಅಭಿವೃದ್ಧಿ ಪರವಾದ ಮಾದರಿ ಬಜೆಟ್: ಶಾಸಕ ಅಮೃತ ದೇಸಾಯಿ ಶ್ಲಾಘನೆ..
ಧಾರವಾಡ
“ರಾಜ್ಯ ಬಜೆಟ್ ನಲ್ಲಿ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಕಾಮಗಾರಿಗೆ 1000 ಕೋಟಿ ಅನುದಾನ ಘೋಷಿಸಿರುವುದು ಹೆಮ್ಮೆಯ ಸಂಗತಿ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಬಡ್ಡಿ ರಹಿತ ಅಲ್ಪಾವಧಿ ಕೃಷಿ ಸಾಲವನ್ನು 3 ರಿಂದ 5 ಲಕ್ಷಕ್ಕೆ ಏರಿಸಿರುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ.
ಕೋವಿಡ್ ನಂತರ ಗ್ರಾಮಾಂತರ ಭಾಗದ ಮಕ್ಕಳಿಗೆ ಉಂಟಾದ ಸಾರಿಗೆ ಸಮಸ್ಯೆ ಬಗೆಹರಿಸಲು ಮಕ್ಕಳ ಬಸ್ ಎಂಬ ಹೊಸ ಯೋಜನೆ ಘೋಷಿಸಲಾಗಿದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 355 ಕೋಟಿ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕ ಸ್ಥಾಪನೆಗೆ ಅನುಮೋದನೆ ದೊರೆತಿದೆ.
ಈ ರೀತಿ ಎಲ್ಲ ಕ್ಷೇತ್ರಕ್ಕೂ ರಾಜ್ಯ ಬಜೆಟ್ ನಲ್ಲಿ ಸಮಾನಾಂತರ ಆದ್ಯತೆ ನೀಡಲಾಗಿದ್ದು, ಇದೊಂದು ಅಭಿವೃದ್ಧಿ ಪರವಾದ ಮಾದರಿ ಬಜೆಟ್ ಆಗಿದೆ ಎಂದು ಶಾಸಕರಾದ ಅಮೃತ ದೇಸಾಯಿ ಹೇಳಿದ್ದಾರೆ.