ಅಬ್ಬಿಗೇರಿ ರಾಘವ ಗೆ ಬೇಕಿದೆ ನಿಮ್ಮೆಲ್ಲರ ಪ್ರೀತಿ
ಬೆಂಗಳೂರು
ಉತ್ತರ ಕರ್ನಾಟಕ ಮೂಲದ ಯುವ ಸಂಗೀತ ನಿರ್ದೇಶಕನೊಬ್ಬ ಜಗತ್ತಿಗೆ ಪ್ರೀತಿ ಪಸರಿಸಲು ಸಜ್ಜಾಗಿದ್ದಾನೆ.
ಅವಿಭಜಿತ ಧಾರವಾಡದ ಈಗಿನ ಗದಗ ಜಿಲ್ಲೆಯ ಅಬ್ಬಿಗೇರಿಯ ಮೂಲದ ರಾಘವ ಕಮ್ಮಾರ, ಉತ್ತರ ಕರ್ನಾಟಕದ ಹಾಗೂ ರಂಗಭೂಮಿಯ R. K ಎಂದೇ ಖ್ಯಾತಿ ಹೊಂದಿದವರು.
ರಂಗ ಭೂಮಿಯನ್ನೆ ತನ್ನ ಬದುಕಾಗಿಸಿಕೊಂಡಿರುವ ರಾಘವ ಕೆ. ಸಂಗೀತ,ಅದರಲ್ಲೂ ಪ್ರಮುಖವಾಗಿ ರಂಗಭೂಮಿ ಸಂಗೀತದಲ್ಲಿ ಹಲವು ವಿಶಿಷ್ಟ ಪ್ರಯತ್ನಗಳನ್ನು ಮಾಡಿ ಜನರಿಗೆ ನಾಟಕಗಳು ಮತ್ತಷ್ಟು ಹತ್ತಿರವಾಗುವಂತೆ ಮಾಡಿದವರು.
ತಮ್ಮ ವಿಶಿಷ್ಟ ಕಲಾ ಪ್ರತಿಭೆಯಿಂದ ರಾಘವ ದೊಡ್ಡ ದೊಡ್ಡ ವೇದಿಕೆಗಳಲ್ಲಿ ತಾವೇ ಸಂಕಲಿಸಿದ ಹಾಡುಗಳ ಮೂಲಕ ಜನ ಮನ ಸೆಳೆದವರು.
ರಾಜ್ಯದ ಹೆಸರಾಂತ ರಂಗಭೂಮಿಗಳಾದ ಧಾರವಾಡ ರಂಗಾಯಣ ಹಾಗೂ ಮೈಸೂರು ರಂಗಾಯಣ ದಲ್ಲಿ ಸಂಗೀತ ನಿರ್ದೇಶನ ಮಾಡಿ ರಂಗಭೂಮಿ ಸಂಗೀತಕ್ಕೆ ಹೊಸ ಆಯಾಮವನ್ನು ನೀಡಿದವರಲ್ಲಿ ಪ್ರಮುಖರೆಂದರೆ ತಪ್ಪಾಗಲಾರದು.
ರಾಘವ ಕೆ. ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರುವ ವಿಡಿಯೋ ಅಲ್ಬಮ್ ಒಂದು ಇದೀಗ ವೈರಲ್ ಆಗುತ್ತಿದ್ದು ಅವರ ಕಂಚಿನ ಕಂಠಕ್ಕೆ ಜನ ಮಂತ್ರ ಮುಗ್ದರಾಗಿದ್ದಾರೆ.
ಏನೋ.ಇದೆ…ಒಂದು ನೆನಪು….ನಿನ್ನಿಂದಲೇ ಪ್ರೀತಿ ಕಂಡೆ ಎಂಬ ಹಾಡು
ಯುವ ಪ್ರೇಮಿಗಳನ್ನು ಹುಚ್ಚು ಹಿಡಿಸಿದೆ. ನೀವು ಈ ಹಾಡನ್ನು ಕೇಳಬೇಕೆಂದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಿಸರ್ಗ ಆಡಿಯೋ ಹಾಗೂ ಯುವಕರ ತಂಡಕ್ಕೆ ನಿಮ್ಮ ಪ್ರೋತ್ಸಾಹವೂ ಬೇಕಿದೆ.
ಒಟ್ಟಿನಲ್ಲಿ ನಮ್ಮ ನೆಲದ ಎಲೆ ಮರೆ ಕಾಯಿಯಂತಿರುವ ರಾಘವ ಕೆ. ಅವರಂತಹ ಪ್ರತಿಭೆಗಳಿಗೆ ಪ್ಯಾನ್ ಕರ್ನಾಟಕ ಪಟ್ಟ ಕೊಟ್ಟು ಮೆರೆಸಬೇಕಿರುವುದು, ನಮ್ಮ ಹುಡುಗರನ್ನೂ ಕನ್ನಡ ಚಿತ್ರರಂಗದ ಮುಖ್ಯಭೂಮಿಕೆಯಲ್ಲಿ ನೋಡಬೇಕೆಂಬ ಆಸೆ ಅನೇಕರದ್ದು.
ಇಂತಹ ಪ್ರತಿಭೆಗಳನ್ನು ಎಲ್ಲೋ ಕಳೆದು ಹೋಗದಂತೆ ಗುರುತಿಸಿ ಬೆಳೆಸಬೇಕೆಂಬ ಭಾವ ನಮ್ಮ ನಿಮ್ಮನ್ನು ಕಾಡುತ್ತಿರುವುದಂತು ಸತ್ಯ..!