ಧಾರವಾಡ

ಅಪಾಯಕ್ಕೆ ಆಹ್ವಾನ ಕೊಡುತ್ತಿರುವ ಯುಜಿಡಿ ಲೈನ್ ಟಾಪ್

ಧಾರವಾಡ

ಧಾರವಾಡ ನಗರ ಸ್ಮಾರ್ಟ ಸಿಟಿ ಅಂತೆಲ್ಲಾ ನಾವು ಹೇಳ್ತಿವಿ.

ಆದ್ರೆ ಇದೇ ಸ್ಮಾರ್ಟ ಸಿಟಿಯಲ್ಲಿರುವ ಕೆಲವೊಂದು ವಾರ್ಡಗಳ example ನಾವು ತೊರಸ್ತಿವಿ ನೋಡಿ.

ಧಾರವಾಡ ಮಾಳಾಪೂರದ ರಸ್ತೆಯಲ್ಲಿ ಗುತ್ತಿಗೆದಾರ ಮಾಡಿರುವ ಅಧ್ವಾನದ ಕೆಲಸ ಇದು.

ಈ‌ ಯುಜಿಡಿ ಟಾಪ್ಗಳು ಅಪಘಾತಕ್ಕೆ ಆಹ್ವಾನ ಕೊಡ್ತಾ ಇದೆ.. ಗುತ್ತಿಗೆದಾರ ಮಾಡಿರುವ ಯಡವಟನಿಂದ ಇಲ್ಲಿ ಅಪಘಾತಗಳು ಹೆಚ್ಚುತ್ತಿವೆ.

ನಡುರಸ್ತೆಯಲ್ಲಿ ಹಾಕಿರುವ ಈ‌ಯುಜಿಡಿ ಲೈನ್ ಟಾಪ್ ರಸ್ತೆಯ ಹಂಪ್ ಕ್ಕಿಂತ ಎತ್ತರವಾಗಿದೆ.

ಇದರ ಮುಂಭಾಗದಲ್ಲಿ ವಾಹನದಲ್ಲಿ ಹೋದ್ರೆ ಸಾಕು ಎಲ್ಲಿ ಅಪಘಾತಗಳು ಆಗ್ತಾವೆ ಏನು ಅನ್ನುವ ಹಾಗೆ ಇದೆ ಇದರ ಪರಿಸ್ಥಿತಿ.

ವಾರ್ಡ್ ನಂಬರ್ 3 ರ ಪಾಲಿಕೆ ಸದಸ್ಯರಾರ ಈರೇಶ ಅಂಚಟಗೇರಿ ಅವರ ವಾರ್ಡಗೆ‌ಇದು ಒಳಪಡುವುದರಿಂದ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವ ವಿಶ್ವಾಸವೂ ಜನರಲ್ಲಿದೆ.

ಈ ಹಿಂದೆಯೂ ಇದೇ ರಸ್ತೆಯಲ್ಲಿರುವ 2 ಯುಜಿಡಿ ಟಾಪಗಳು ಮಳೆ ಬಂದ್ರೆ ಕೊಳಚೆ ನೀರು ಓವರ್ ಪ್ಲೋ.. ಆಗಿ ರಸ್ತೆ ತುಂಬೆಲ್ಲಾ ಹರಿಯುತ್ತಿತ್ತು. ಈ ಬಗ್ಗೆ ಪಾಲಿಕೆ ಸದಸ್ಯರ ಗಮನಕ್ಕೆ ಪವರ್ ಸಿಟಿ ನ್ಯೂಸ ಕನ್ನಡ ತಂದಾಗ ಈರೇಶ ಅಂಚಟಗೇರಿ ಅವರು ಪಾಲಿಕೆ ಆಯುಕ್ತರ ಗಮನಕ್ಕೆ ತಂದು ಸಮಸ್ಯೆಯನ್ನು ಸರಿ‌ಮಾಡಿಕೊಡಿ ವಾರ್ಡನ ಜನರಿಗೆ ತೊಂದ್ರೆ ಆಗುತ್ತಿದೆ ಎಂದು ಹೇಳಿದ್ದರು.

Related Articles

Leave a Reply

Your email address will not be published. Required fields are marked *