ಸ್ಥಳೀಯ ಸುದ್ದಿ

ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ-ಆತ್ಮಹತ್ಯೆ‌ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಟ್ವೀಸ್ಟ್

ಯಾದಗಿರಿ

ದಕ್ಷ ಪೊಲೀಸ ಅಧಿಕಾರಿ‌ ದೌಲತ್ ಅವರಿಂದ ಪ್ರಕರಣ ಬಯಲಿಗೆ ಬಂದಿದೆ.

ಹೌದು ಹೆಂಡತಿಯೊಬ್ಬಳು ತನ್ನ ಪ್ರೀಯಕರನೊಂದಿಗೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಆರೋಪದಲ್ಲಿ ಹೆಂಡತಿ ಹಾಗೂ ಪ್ರೀಯಕರನ ಬಂಧನವಾಗಿದೆ.

ಕೊಲೆ‌ ಮಾಡಿ, ಬೈಕ್‌ಮೇಲೆ ತಂದು ಮರಕ್ಕೆ ಹಗ್ಗದಿಂದ ಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ ಎನ್ನುವ ರೀತಿಯಲ್ಲಿ ಮೊದಲು ಬಿಂಬಿಸಲಾಗಿತ್ತು.

ಪ್ರಕರಣದ ಜಾಡು ಹಿಡಿದು ತನಿಖೆ ಶುರು ಮಾಡಿದ ಗುರುಮಿಠಕಲ್ ‌ಸಿಪಿಐ ಎನ್.ಕೆ.ದೌಲತ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುಮಿಠಕಲ್ ತಾಲೂಕಿನ ಕೊಂಕಲ್ ಗ್ರಾಮದ ಕಾಶಪ್ಪ ಮಲ್ಲಪ್ಪಗೋಳ ಮೃತ ದೇಹ
ಜೂನ 16 ರಂದು ಹೊಲದಲ್ಲಿ ಗಿಡಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗುತ್ತೆ.

ಪ್ರಕರಣವನ್ನು ಅನ ನ್ಯಾಚುರಲ್ ಡೆತ್ ಅಂತಾ ಯಾದಗಿರಿ ‌ಎಸಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಸಿಪಿಐ ದೌಲತ್ ಅವರು ಇದೊಂದು ವ್ಯವಸ್ಥಿತ ಕೊಲೆ ಎಂದು ತನಿಖೆ ಮಾಡುತ್ತಾರೆ.

ಜುಲೈ 21 ರಂದು ಕೊಲೆ ಆರೋಪಿ ಅನೀತಾ ಹಾಗೂ ಆಕೆಯ ಪ್ರೀಯಕರ ನಾಗೇಶನನ್ನು ಬಂಧಿಸಿ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಿಪಿಐ ಎನ್.ಕೆ.ದೌಲತ ಅವರು ಈ ವಿಶೇಷ ತನಿಖೆಯ ಮೂಲಕ ಯಾದಗಿರಿ ಜಿಲ್ಲೆಯ ಪೊಲೀಸರ ದಕ್ಷತೆಯನ್ನು ಹೆಚ್ವಿಸಿದಂತೆ ಆಗಿದ್ದು, ಹಿರಿಯ ಪೊಲೀಸ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Related Articles

Leave a Reply

Your email address will not be published. Required fields are marked *