ಸ್ಥಳೀಯ ಸುದ್ದಿ
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಸಂತೋಷ ಲಾಡ್
ಧಾರವಾಡ
ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಸಂಗಮೇಶ್ವರದಲ್ಲಿ ಸಚಿವ ಸಂತೋಷ್ ಲಾಡ್ ಸಭೆ ನಡೆಸಿ, ಸಾರ್ವಜನಿಕ ಕುಂದುಕೊರತೆ ಆಲಿಕೆ ಮಾಡಿದ್ರು.
ಈ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿ ಇರದ ಅಧಿಕಾರಿಗಳ ವಿರುದ್ಧ ಸಚಿವರು ಕೆಂಡಾಮಂಡಲವಾಗಿ ನೇರವಾಗಿ ಡಿಸಿಗೆ ಫೋನ ಮಾಡಿದ್ರು.
ಅಧಿಕಾರಿಗಳಾರೂ ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ, ಅನ್ನೋ ಮಾಹಿತಿಯಿಂದ ಸಿಟ್ಟಾದ ಸಚಿವರು
ಅಧಿಕಾರಿಗಳನ್ನ ತರಾಟೆಗೆ
ತೆಗೆದುಕೊಂಡ್ರು.
ಧಾರವಾಡದಲ್ಲಿ ಮನೆ ಮಾಡಿಕೊಂಡಿರುವ ಕಲಘಟಗಿ ಕ್ಷೇತ್ರದ ವಿವಿಧ ಇಲಾಖೆ ಅಧಿಕಾರಿಗಳು, ಒಂದು ವಾರದೊಳಗಾಗಿ ಎಲ್ಲರೂ ಕಲಘಟಗಿಯಲ್ಲಿ ವಾಸವಾಗಿರಬೇಕು.ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಫೋನ್ ಕರೆ ಮಾಡಿ ಸರ್ಕ್ಯುಲರ್ ಹೊರಡಿಸುವಂತೆ ಆದೇಶಿಸುವಂತೆ ಸಚಿವ ಸಂತೋಷ ಲಾಡ್ ಸೂಚಿಸಿದ್ರು.