ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಿ: ಡಾ.ಡಿ ಮೋಹನ
ಹಾಲಕೆರೆ ಮಾರನಬಸರಿ ಗ್ರಾಮ ಪಂಚಾಯತಿಗೆ ಭೇಟಿ ವಿವಿಧ ಕಾಮಗಾರಿ ವೀಕ್ಷಣೆ
ಗಜೇಂದ್ರಗಡ:ಯಾವುದೇ ತೊಡಕು ಇರದೆ ಅಗತ್ಯ ಕಾಮಗಾರಿಗಳಿಗೆ ಮೊದಲ ಆಧ್ಯತೆ ನೀಡಿ ಕಾಮಗಾರಿ ಪ್ರಾರಂಭಿಸುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಡಿ ಮೋಹನ ಗ್ರಾ.ಪಂ. ಆಡಳಿತ ಮಂಡಳಿಗೆ ಸೂಚಿಸಿದರು.
ತಾಲೂಕಿನ ಹಾಲಕೆರೆ, ಮಾರನಬಸರಿ ಗ್ರಾಮ ಪಂಚಾಯತಿಗಳಿಗೆ ಶುಕ್ರವಾರ ಭೇಟಿ ನೀಡಿ ವಿವಿಧ ಪೈಲ್ ಗಳನ್ನು ಪರಿಶೀಲಿಸಿ, ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.ಹಾಲಕೆರೆ ಗ್ರಾಮ ಪಂಚಾಯಿತಿಗೆ ಬೆಳಗ್ಗೆ 8 ಗಂಟೆಗೆ ಭೇಟಿ ನೀಡಿ ಪಂಚಾಯತಿಯ ಪೈಲ್ ಗಳನ್ನು ಪರಿಶೀಲಿಸಿದರು. ನಂತರ ಬೂದು ನೀರು ನಿರ್ವಹಣೆ ಕಾಮಘಾರಿ ಸ್ಥಳ ಪರಿಶೀಲಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸುವಂತೆ ಅಧ್ಯಕ್ಷರಿಗೆ ತಾಂತ್ರಿಕ ಸಹಾಯಕರಿಗೆ ತಿಳಿಸಿದರು.
ನಂತರ ಘಜ ತ್ಯಾಜ್ಯ ವಿಲೇವಾರಿ ಘಟಕ, ಡಿಜಿಟಲ್ ಗ್ರಂಥಾಲಯ, ಅಮೃತ ಸರೋವರ ಕೆರೆ, ಕುಡಿಯುವ ನೀರಿನ ಕೆರೆ ವೀಕ್ಷಣೆ ಮಾಡಿ ಅಲ್ಲಿಯ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಭರವಸೆ ನೀಡಿದರು. ಕುಡಿಯುವ ನೀರಿನ ಸಮಸ್ಯೆಗಳ ಆಲಿಸಿ ಕುಡಿಯುವ ನೀರು ಸರಬರಾಜು ಇಲಾಖೆಗೆ (ಡಿಬಿಒಟಿ)ಯ ಮುಖ್ಯ ಇಂಜನೀಯರ್ ಗೆ ಮಾತನಾಡಿ ನೀರು ಸಮಸ್ಯೆಯಾಗದಂತೆ ನೀರನ್ನು ಒದಗಿಸಲು ಸೂಚಿಸಿದರು.
ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಸಂಖ್ಯೆ ಶಾಲೆಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಶಾಲೆ ಸೋರುತ್ತಿರುವ ಬಗ್ಗೆ ಶಿಕ್ಷರು ಮಾಹಿತಿ ನೀಡಿದ್ದು, ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದರು. ಪಿಂಕ್ ಶೌಚಾಲಯ ಬಳಕೆ ಮಾಡುವಂತೆ ಶಿಕ್ಷಕರಿಗೆ ತಿಳಿಸಿದರು. ನರೇಗಾ ಯೋಜನೆಯಡಿಯಲ್ಲಿ ಆಟದ ಮೈದಾನ ಅಭಿವೃದ್ಧಿ ಪಡಿಸುವಂತೆ ತಾಂತ್ರಿಕ ಸಹಾಯಕರಿಗೆ ತಿಳಿಸಿದರು.
ಮಾರನಬಸರಿ ಗ್ರಾ.ಪಂಗೆ ಭೇಟಿ:
ಮಾರನಬಸರಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಂಚಾಯತಿಗೆ ದಾಖಲೆಗಳು, ಕಡತಗಳನ್ನು ಪರಿಶೀಲಿಸಿದರು. ನಂತರ ಬೂದು ನೀರು ನಿರ್ವಾಹಣೆ ಕಾಂಗಾರಿ ಸ್ಥಳ ಪರಿಶೀಲಿಸಿ ಕಾಮಗಾರಿ ಪ್ರಾರಂಭಿಸುವಂತೆ ಪಿಡಿಒ ಸೂಚಿಸಿದರು.
ಅಂಗನವಾಡಿ ಶಾಲೆಗೆ ಭೇಟಿ ನೀಡಿ ಆಹಾರ, ಅಡುಗೆ ಬಗ್ಗೆ ವಿಚಾರಿಸಿದರು. ಮಕ್ಕಳಿಂದ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸಿದರು. ಶಾಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಸಂಜೀವಿನಿ ಒಕ್ಕೂಟ ಭೇಟಿ ನೀಡಿ ಸಂಘದ ಸದಸ್ಯರ ಜೊತೆಗೆ ಚರ್ಚಿಸಿದರು. ನಂತರ ಸಂಘದಿಂದ ಸಹಾಯಧನ ಪಡೆದು ರೊಟ್ಟಿ ಮಿಷನ್ ನಡೆಸುತ್ತಿರುವ ಫಲಾನುಭವಿಗಳ ಮನೆ ಭೇಟಿ ನೀಡಿ ಅವರ ವ್ಯಾಪಾರ ವೈವಾಟುಗಳ ಬಗ್ಗೆ ಮಾಹಿತಿ ಪಡೆದು ಚನ್ನಾಗಿ ಕೆಲಸ ಮಾಡರಿ ಎಂದು ಶುಭಹಾರೈಸಿದರು.
ಅಮೃತ ಸರೋವರ ಕೆರೆ ವೀಕ್ಷಣೆಗೆ ಇನ್ನಷ್ಟು ಅಭಿವೃದ್ಧಿ ಪಡಿಸುವಂತೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾ.ಪಂ. ಆಡಳಿತ ಮಂಡಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು, ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.
ವರದಿ: ಮಹೇಶ ಮೇಟಿ