ಹೆಲ್ಮೇಟ್ ಧರಿಸದೆ ಬಂದವನ ಕೈಗೆ ಲಿಸ್ಟ್ ಕೊಟ್ಟ: ಎ ಎಸ್ ಐ ಅಳಗವಾಡಿ!
ಹುಬ್ಬಳ್ಳಿ
ಅವಳಿನಗರದ ವಿವಿಧೆಡೆ ಯಲ್ಲಿ ವಾಹನ ತಪಾಸಣೆ ಕೈಗೊಂಡಿರುವ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಯಾವುದೆ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿರುವ ಘಟನೆ ಅಲ್ಲಲ್ಲಿ ಸಾಮಾನ್ಯವಾಗಿವೆ.
ಆದರೆ ದ್ವಿಚಕ್ರ ವಾಹನ ಸವಾರನೊಬ್ಬನ ಉತ್ತರ ಸಂಚಾರಿ ಪೊಲಿಸ್ ಠಾಣೆಯ ಸಿಬ್ಬಂದಿ ಎ ಎಸ್ ಐ ರಮಜಾನಬಿ ಅಳಗವಾಡಿಯವರ ಕೈಗೆ ಸಿಕ್ಕು ಪೆಚಾಡಿದ ಘಟನೆ ನಗರದ ಶಿರೂರ ಪಾರ್ಕನಲ್ಲಿ ನಡೆದಿದೆ.
ಹೌದು ಬೈಕ್ ಸವಾರನೋರ್ವ ಹೆಲ್ಮೆಟ್ ಧರಿಸದಿರುವುದನ್ನು ಗಮನಿಸಿದ ಪೊಲೀಸರು ವಾಹನ ತಡೆದು ತಪಾಸಣೆಗೆ ಮುಂದಾಗಿದ್ದಾರೆ.
ಇ ವೇಳೆ (KA 25EM 0244) ದ್ವಿಚಕ್ರ ವಾಹನ ಸವಾರ ಮಾಡಿರುವ ಸಂಚಾರಿ ನಿಯಮ ಉಲ್ಲಂಘನೆಯ ಇದುವರೆಗಿನ ಒಟ್ಟು ಮೊತ್ತ ಬರೋಬ್ಬರಿ 17,500ರೂ.ಗಳು ಎಂದು ಗೊತ್ತಾಗಿದೆ.
ಎ ಎಸ್ ಐ ರಮಜಾನಬಿ ರವರು ಸಂಪೂರ್ಣ ದಂಡ ಭರ್ತಿ ಮಾಡಿದ ನಂತರವೆ ವಾಹನ ಬಿಡುವುದಾಗಿ ತಿಳಿಸಿದ್ದಾರೆ. ವಾಹನ ಸವಾರ ಮಹ್ಮದ ರಫೀಕ ಕೂಡ ತಾನು ಮಾಡಿದ ತಪ್ಪಿನಿಂದಾಗಿ ಖಾಲಿ ಕೈಲಿ ಮನೆ ಮುಟ್ಟುವಂತಾಗಿದೆ.
ಇದು ಎಲ್ಲ ವಾಹನ ಸವಾರರಿಗೆ ಎಚ್ಚರಿಕೆಯ ಘಂಟೆಯಾಗಿದ್ದು ಸಂಚಾರಿ ನಿಯಮ ಪಾಲಿಸಿ ದಂಡದಿಂದ ಮತ್ತು ಸಂಭವನೀಯ ಅಪಘಾತ ಗಳಿಂದ ಸುರಕ್ಷಿತ ವಾಗಿರಲು ಪಾಠವಾಗಿದೆ.