ಧಾರವಾಡ

ಹಾಫ್ ಐರನ್ ಮ್ಯಾನಗೆ ಹೆಚ್ಚುತ್ತಿವೆ ಪ್ರೀತಿಯ ಸನ್ಮಾನಗಳು

ಧಾರವಾಡ

ಹಾಫ್ ಐರನ್ ಮ್ಯಾನ್ ಆಗಿ ಸಾಧನೆ ಮಾಡಿರುವ ಪೊಲೀಸ ಕಾನ್ಸಟೇಬಲ್ ಕಿರಣ ಗಾಣಿಗೇರ ಅವರಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆತ್ಮೀಯರು ಹಾಗೂ ಸ್ನೇಹಿತರು ಪ್ರೀತಿಯ ಸನ್ಮಾನ ಮಾಡುತ್ತಿದ್ದಾರೆ.

ಇತ್ತೀಚಿಗೆ ಕೊಲ್ಲಾಪುರದಲ್ಲಿ ಸಾವಿರಾರು ಸ್ಫರ್ಧಾಳುಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಶನರೇಟನಲ್ಲಿ ಸಿಎಸ್ ಸಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಿರಣ ಗಾಣಿಗೇರ ಹಾಫ್ ಐರನ್ ಮ್ಯಾನ್ ಆಗಿ ಸಾಧನೆ ಮಾಡಿದ್ದಾರೆ.

ಕಿರಣ ಗಾಣಿಗೇರ ಅವರು ಬಾಡಿಗೆ ಸೈಕಲ್ ಪಡೆದು ಸತತ ೧ ವರ್ಷ ಶ್ರಮವಹಿಸಿ ಹಾಫ್ ಐರನ್ ಮ್ಯಾನ್ ಸಾಧನೆ ಮಾಡಿದ್ದಾರೆ. ಈ ಬಗ್ಗೆ ನಿಮ್ಮ‌ಪವರ್ ಸಿಟಿ‌ ನ್ಯೂಸ್ ಕನ್ನಡದಲ್ಲಿ ಕಠಿಣ ಶ್ರಮದ ಮೂಲಕ ಸಾಧಕನ ಸಾಧನೆ ಎಂದು ಸ್ಪೇಶಲ್ ಸ್ಟೋರಿ ಪ್ರಸಾರ ಮಾಡಲಾಗಿದೆ.

ಇವರ ಸಾಧನೆಗೆ ಪೊಲೀಸ್ ಆಯುಕ್ತರಾದ ಲಾಬುರಾಮ ಅವರು, ಕಚೇರಿಗೆ ಕರೆಯಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಇವರ ರೀತಿಯಲ್ಲೇ, ಐರನ್ ಮ್ಯಾನ್ ಆಗಿರುವ ಹೆಸ್ಕಾಂ ವಿಭಾಗದ ಪೊಲೀಸ್ ಅಧಿಕಾರಿ ಮುರುಗೇಶ ಚೆನ್ನಣ್ಣವರ್ ಕೂಡ ಸನ್ಮಾನಿಸಿ ಗೌರವಿಸಿದ್ದಾರೆ.

ಇದರ ಜೋತೆ ಜೋತೆಗೆ ಕಿರಣ ಗಾಣಿಗೇರ ಅವರ ಆತ್ಮೀಯ ಸ್ನೇಹಿತರು ಹಾಗೂ ಅಭಿಮಾನಿಗಳು ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅವರಲ್ಲಿ ಮತ್ತಷ್ಟು ಕ್ರೀಡಾಸ್ಪೂರ್ತಿ ಹೆಚ್ಚುವಂತೆ ಮಾಡಿದ್ದಾರೆ.

ಹಾಫ್ ಐರನ್ ಮ್ಯಾನ್ ಆಗಿರುವ ಕಿರಣ ಗಾಣಿಗೇರ ಅವರಿಗೆ ನಮ್ಮ ಪವರ್ ಸಿಟಿ‌ ನ್ಯೂಸ್ ಕನ್ನಡದಿಂದ ಮತ್ತೊಮ್ಮೆ ಅಭಿನಂದನೆಗಳು..

Related Articles

Leave a Reply

Your email address will not be published. Required fields are marked *