ಸ್ಮಾರ್ಟಿ ಸಿಟಿಯಲ್ಲೊಂದು ಕಳಪೆ ಕಾಮಗಾರಿಯ ಪಾಲಿಕೆ ಕಚೇರಿ
ಧಾರವಾಡ
ಧಾರವಾಡ- ಹುಬ್ಬಳ್ಳಿ ಅವಳಿನಗರ ಸ್ಮಾರ್ಟ ಸಿಟಿ ಆಗಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನ ಬರುತ್ತಿದೆ.
ಇಂತಹ ಪಾಲಿಕೆ ವಲಯ ಕಚೇರಿ 2 ರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಯಾಕೆಂದ್ರೆ ಈ ಕಚೇರಿಗೆ ಹೋಗಬೇಕಾದ್ರೆ ಯಾವಾಗ ಮೇಲ್ಛಾವಣಿ ಮೈಮೇಲೆ ಕುಸಿದು ಬಿಳುತ್ತೆ ಎನ್ನುವುದು ಗೊತ್ತಾಗೊದಿಲ್ಲಾ. ಹಾಗಾಗಿದೆ ಇಲ್ಲಿನ ಪರಿಸ್ಥಿತಿ.
ಅಧಿಕಾರಿಗಳು ಇಲ್ಲಿ ಕೆಲಸ ಮಾಡುವವರು ನೋಡಿಯೂ ನಾವು ಏನು ಮಾಡೊಕೆ ಆಗೊಲ್ಲಾ ಸ್ವಾಮಿ ಎಂದು ಸಮ್ಮನಾಗಿದ್ದಾರೆ.
ಈ ಬಗ್ಗೆ ಪವರ್ ಸಿಟಿ ನ್ಯೂಸ್ ಕನ್ನಡ ಎಚ್ಚರಿಸುವ ಕೆಲಸ ಮಾಡುತ್ತಿದೆ.
ಈ ಪಾಲಿಕೆ ಕಚೇರಿ ವ್ಯಾಪ್ತಿಯಲ್ಲಿ ಧಾರವಾಡದ ನಗರದ ಮದಿಹಾಳ, ಗಾಂಧಿಚೌಕ, ಮುರಘಾಮಠದ ಸುತ್ತಲಿನ ಪ್ರದೇಶ, ಮಣಕಿಲ್ಲಾ ಸೇರಿದಂತೆ 6,7,8 ಹಾಗೂ 11 ರ ವಾರ್ಡಗಳು ಬರುತ್ತವೆ. ಈ ವ್ಯಾಪ್ತಿಯಲ್ಲಿನ ನೂರಾರು ಸಾರ್ವಜನಿಕರು ಪ್ರತಿನಿತ್ಯ ಸಮಸ್ಯೆಗಳ ಸಲುವಾಗಿ ಇದೇ ಪಾಲಿಕೆ ಕಚೇರಿಗೆ ಆಗಮಿಸುತ್ತಾರೆ.
ಸುಮಾರು 60 ವರ್ಷಗಳಷ್ಟು ಹಳೆಯದಾದ ಕಟ್ಟಡು ಇದಾಗಿದೆ.
ಇದು ಪಾಲಿಕೆ ಒಡೆತನದ ಕಾಂಪ್ಲೇಕ್ಸ ಆಗಿದ್ದು, ಯಾವಾಗ ಮೆಲ್ಚಾವಣಿ ಸೂರು ಬಿದ್ದು ಜನರಿಗೆ ಅಪಾಯವನ್ನುಂಟು ಮಾಡುತ್ತೆ ಎನ್ನುವುದು ಗೊತ್ತಿಲ್ಲ.
ಇಂಥದೊಂದು ಕಟ್ಟಡದಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತೆ ಆಗಿದೆ.
ಈಗಲಾದ್ರೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಈ ಗಂಭೀರ ಸಮಸ್ಯೆಯನ್ನು ಅರಿತು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಿದೆ.
ಇದು ಪವರ್ ಸಿಟಿ ನ್ಯೂಸ್ ಕಳಕಳಿ