“ಸಲಗ” ನ ದಾಳಿಗೆ ಅರಣ್ಯ ಅಧಿಕಾರಿಗಳು ಹೈರಾಣ!
ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳ ದಿಢೀರ್ ದಾಳಿ ಪ್ರಾಣಾಪಾಯದಿಂದ ಪಾರು!
ಕಲಘಟಗಿ:
ತಾಲ್ಲೂಕಿನ ತಂಬೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆಯ ವೇಳೆ ಆನೆಗಳ ಹಿಂಡೊಂದು ದಿಢೀರನೆ ದಾಳಿ ನಡೆಸಿದ ಪರಿಣಾಮ ಕೆಲವು ಸಿಬ್ಬಂದಿಗಳು ಸೆರಿದಂತೆ ಅರಣ್ಯ ಅಧಿಕಾರಿಗಳು ಗಾಯಗೊಂಡರು.ಕೂಡಲೆ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿಗಳು ಪ್ರಾಣ ಉಳಿಸಿ ಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ವಿವರ : ಹಲವಾರು ದಿನಗಳಿಂದ 8ಕಾಡಾನೆಗಳ ಹಿಂಡೊಂದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮ ಗಳಾದ ಆಲದಕಟ್ಟಿ,ತಂಬೂರ, ಸಂಗಮೇಶ್ವರ,ಡಿಂಬವಳ್ಳಿ ಗ್ರಾಮಗಳ ರೈತರ ಜಮಿನಿನ ಪಕ್ಕದ ಅರಣ್ಯ ಪ್ರದೇಶದಲ್ಲಿ ಬಿಡು ಬಿಟ್ಟಿದ್ದವು. ಆದರೆ ಅರಣ್ಯ ಅಧಿಕಾರಿಗಳು ನಿರಂತರ ಕಾಡಿಗೆ ಅಟ್ಟುವ ಕಾರ್ಯಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಮಂಗಳವಾರ ಅಧಿಕಾರಿಗಳ ಮೇಲೆ ಆನೆಗಳು ದಾಳಿ ನಡೆಸಿವೆ.
ಬಮ್ಮಿಗಟ್ಟಿ ವಲಯ ಅರಣ್ಯ ಅಧಿಕಾರಿ ಉಮ್ಮೆಶ ಕಡಿ, ಮೌನೇಶ ಲಿಂಗನಶೆಟ್ಟಿಕೊಪ್ಪ,ಸುರೇಶ ಅರವಳ್ಳಿ, ಪರಶುರಾಮ, ಕೃಷ್ಣ ಪಮ್ಮಾರ ಎಂಬು ಕಾರ್ಯಾಚರಣೆ ಯ ವೇಳೆಗೆ. ಆನೆಯು ಕ್ವಾರಿಯಿಂದ ದಾಳಿ ಮಾಡಿದ್ದರಿಂದ ಹೆಚ್ಚಿನ ಗಾಯ ಸಂಭವಿಸಿದೆ ಇನ್ನುಳಿದ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯ ಸಂಭವಿಸಿದ್ದು. ಕೂಡಲೇ ಎಲ್ಲ ಸಿಬ್ಬಂದಿಗಳನ್ನ ಸ್ಥಳೀಯ ಸರಕಾರಿ ತಾಲ್ಲೂಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.