ಸರಕಾರ ಮೊಟ್ಟೆ ವಿತರಣೆ ಯೋಜನೆ ಕೈ ಬಿಡದಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ!
ಹುಬ್ಬಳ್ಳಿ
ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಮಠಾಧೀಶರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು
ಹುಬ್ಬಳ್ಳಿಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಸಂಘಟನೆಯ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಪಟ್ಟಬಧ್ದ ತಾಸಕ್ತಿಗಳ ಒತ್ತಾಸೆಯನ್ನು ಸರ್ಕಾರ ಕೈ ಬಿಡಬೆಕೆಂದು ಒತ್ತಾಯಿಸಿ ಅಸಮಾಧಾನ ಹೊರಹಾಕಿದರು.
ಸಮತಾ ಸೇನೆ ರಾಜ್ಯಧ್ಯಕ್ಷ ಗುರುನಾಥ ಉಳ್ಳಿಕಾಶಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರಿಂದ ನಗರದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿ ವರೆಗೂ
ಮೊಟ್ಟೆ ವಿರೋಧಿಸುವ ಕೆಲವು ಮಠಾಧಿಶರ ಹಾಗೂ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆಂದು ಆರೋಪಿಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಬೊಮ್ಮಾಯಿ ನೇತೃತ್ವದ ಸರ್ಕಾರ ಯಾರ ಒತ್ತಾಸೆಗೂ ಮಣಿಯದೇ ವೈಜ್ಞಾನಿಕವಾಗಿ ಸಾಕಷ್ಟು ಪೌಷ್ಟಿಕಾಂಶ ಹೊಂದಿರುವ ಮೊಟ್ಟೆ ಯೋಜನೆಯನ್ನ ನಿರಂತರ ಗೊಳಿಸಿ. ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನುಕೂಲ ವಾಗಿರುವುದರಿಂದ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ರಾಜಕೀಯದಲ್ಲಿನ ಸ್ವಾರ್ಥಕ್ಕಾಗಿ ಸಮಾಜಕ್ಕೆ ತಪ್ಪು ಸಂದೇಶ ಸಾರುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಯಾಗದೆ. ಸರಕಾರ ಮೊಟ್ಟೆ ವಿತರಣೆ ಯೊಜನೆಯನ್ನು ಕೈಬಿಡದೆ ಮುನ್ನಡೆಸಬೆಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾ ನಿರತ ಕಾರ್ಯಕರ್ತರು ಮೊಟ್ಟೆ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ರಹಿಸ್ ಖೊಜೆ ಮಹೇಶ್ ಧಾಬಡೆ, ಬಾಷಾ,ಚೇತನ್ ಹಿರೆಕೆರೂರ,ಬಲ್ಲಾ ಸೇಟ್ ಅಕ್ಬರ್ ಮುಲ್ಲಾ,ಮಲ್ಲೇಶ್ ,ಭೀಮಾ ಹಲಗಿ ಮುಂತಾದವರು ಭಾಗವಹಿಸಿದ್ದರು.