ಸ್ಥಳೀಯ ಸುದ್ದಿ
ಸಮಸ್ಯೆಗೆ ಸ್ಪಂದಿಸದ ಕಾರ್ಪೊರೇಟರ್ ವಿರುದ್ಧ ಆಕ್ರೋಶ
ಧಾರವಾಡ
ಸ್ಮಾರ್ಟ ಸಿಟಿ ಅಂತಾ ಹೆಸರು ಮಾಡಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಇನ್ನು ತಕ್ಕ ಮಟ್ಟಿಗೆ ಅಭಿವೃದ್ಧಿ ಎನ್ನೊದು ಮರಿಚಿಗೆ ಆಗಿದೆ.
ಇದಕ್ಕೆ ತಾಜಾ ಉದಾಹರಣೆ ಎಂದ್ರೆ ಧಾರವಾಡದ ವಾರ್ಡ ನಂಬರ್ 12 . ವಿನಾಯಕನಗರದ 4 ನೇ ಕ್ರಾಸನಲ್ಲಿ ನಿತ್ಯವೂ ಡ್ರೈನೇಜ್ ಸಮಸ್ಯೆಯಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತೆ ಆಗಿದೆ.
ಇಲ್ಲಿನ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಅವರು ಮಾತ್ರ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಕೂಡ ತಮ್ಮ ಗಮನಕ್ಕೆ ಯಾವುದೇ ವಿಷಯ ಬಂದಿಲ್ಲಾ ಎನ್ನುವಂತೆ ಸುಮ್ಮನಾಗಿದ್ದಾರೆ.
ವಾರ್ಡ ಅಭಿವೃದ್ಧಿ ಜೋತೆಗೆ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅಭಿವೃದ್ಧಿ ವಾತಾವರಣ ಸೃಷ್ಟಿಸಿ ಎನ್ನುವ ಮೇಯರ್ ಮಾತಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ.
ಈ ಬಗ್ಗೆ ವಿನಾಯಕನಗರದ ನಿವಾಸಿಗಳು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈಗಲಾದ್ರೂ ಮೇಯರ್ ಈರೇಶ ಅಂಚಟಗೇರಿ ಅವರು ಈ ಸಮಸ್ಯೆಯನ್ನು ಬಗೆಹರಿಸಿಕೊಡ್ತಾರೆ ನೋಡಬೇಕಿದೆ.