ಧಾರವಾಡ
ಸಣ್ಣ ರಥ ಎಳೆದು ದೊಡ್ಡ ಭಕ್ತಿ ಸಮರ್ಪಣೆ
ಧಾರವಾಡ
ಹೊಸ್ತಿಲ್ ಹುಣ್ಣಿಮೆ ಪ್ರಯುಕ್ತ ರಾಜ್ಯಾದ್ಯಂತ ವಿವಿಧೆಡೆ ನಡೆಯಲಿದ್ದ ವೀರಭದ್ರೇಶ್ವರ ಜಾತ್ರೆಗಳನ್ನು ಕೋರೊನಾ ಕಾರಣಕ್ಕೆ ಸರಳವಾಗಿ ಆಚರಿಸಬೇಕಿರುವುದರಿಂದ ಧಾರವಾಡದಲ್ಲಿ ಸಣ್ಣ ರಥವನ್ನೆಳೆದು ಸಂಪ್ರದಾಯಬದ್ಧವಾಗಿ ಜಾತ್ರೆ ನಡೆಸಲಾಯಿತು.
ಧಾರವಾಡದಲ್ಲಿನ ಉಳವಿ ಬಸವೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರೋ ಉದ್ಭವ ವೀರಭದ್ರೇಶ್ವರನಿಗೆ ಪುರಾಣ ಕಾಲದ ಇತಿಹಾಸವಿದ್ದು, ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಅದ್ದೂರಿ ಜಾತ್ರೆ ನಡೆಯುತ್ತದೆ.
ಆದರೆ ಈ ಸಲ ಕೊರೊನಾ ಕಾರಣಕ್ಕೆ ಸರಳವಾಗಿ ಮಾತ್ರವೇ ಆಚರಿಸಬೇಕಿರುವುದರಿಂದ ಸೀಮಿತ ಭಕ್ತರು ಸೇರಿ ಪುಟ್ಟ ರಥವನ್ನು ದೇವಸ್ಥಾನದಿಂದ ಉಳವಿ ಬಸವೇಶ್ವರ ದೇವಸ್ಥಾನದ ಮುಖ್ಯ ದ್ವಾರದವರೆಗೂ ಎಳೆದು ಪುನಃ ದೇವಸ್ಥಾನಕ್ಕೆ ತರಲಾಯಿತು. ವಾದ್ಯ ಮೇಳಗಳು ಮೆರಗು ನೀಡಿದವು. ಅಲ್ಲದೇ ಇಂದು ನಡೆಯಬೇಕಿದ್ದ ಗೊಡಚಿ ವೀರಭದ್ರೇಶ್ವರ ಅದ್ದೂರಿ ಜಾತ್ರೆಯೂ ಸಹ ರದ್ದಾಗಿರುವುದರಿಂದ ಅಲ್ಲಿಗೆ ತೆರಳಬೇಕಿದ್ದ ಧಾರವಾಡದ ಭಕ್ತರು ಈ ರಥೋತ್ಸವದಲ್ಲಿಯೇ ಪಾಲ್ಗೊಂಡು ಕೃತಾರ್ಥರಾದರು.