ಸ್ಥಳೀಯ ಸುದ್ದಿ
ವ್ಯವಹಾರಿಕ ಕಾರಣಕ್ಕೆ ಚಾಕು ಇರಿತ
ಧಾರವಾಡ
ಧಾರವಾಡದಲ್ಲಿ ವ್ಯವಹಾರಿಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ನಗರದ ಪ್ರತಿಷ್ಠಿತ ಮನೆತನದ ವ್ಯಕ್ತಿಯಾಗಿರುವ ನಿಜಾಮುದ್ದೀನ್ ಶೇಖ ಎನ್ನುವರು ಹಣಕಾಸಿನ ವ್ಯವಹಾರದ ವಿಷಯವಾಗಿ
ಸೈಯದ ಜಾಫರ ಶೇಖ ಸನದಿ (40) ಎಂಬಾತನ ಮೇಲೆ ಕೋಲೆ ಯತ್ನ ಮಾಡಿದ್ದಾರೆ.
ಧಾರವಾಡದ ಎತ್ತಿನಗುಡ್ಡ ರಸ್ತೆಯಲ್ಲಿರುವ ಹಾಶ್ಮೀನಗರದಲ್ಲಿ ಈ ಘಟನೆ ಇಂದು ಬೆಳ್ಳಿಗ್ಗೆ ನಡೆದಿದ್ದು, ಗಾಯಾಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಬಂಧ ಆರೋಪಿ ಉಪನಗರ ಪೊಲೀಸ್ ಠಾಣೆಗೆ ಶರಣಾಗಿದ್ದು, ಠಾಣೆಯಲ್ಲಿ ಕೊಲೆಯತ್ನದ ಕೇಸ್ ದಾಖಲಾಗಿದೆ.